ವೀರಕಂಭ : ಪಿಕಪ್ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ ಸವಾರಗೆ ಗಾಯ - Karavali Times ವೀರಕಂಭ : ಪಿಕಪ್ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ ಸವಾರಗೆ ಗಾಯ - Karavali Times

728x90

6 July 2024

ವೀರಕಂಭ : ಪಿಕಪ್ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ ಸವಾರಗೆ ಗಾಯ

ಬಂಟ್ವಾಳ, ಜುಲೈ 06, 2024 (ಕರಾವಳಿ ಟೈಮ್ಸ್) : ಪಿಕಪ್ ವಾಹನ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಗಾಯಗೊಂಡ ಘಟನೆ ವೀರಕಂಭ ಗ್ರಾಮದ ಮಚ್ಚ ಎಂಬಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ. 

ಗಾಯಗೊಂಡ ದ್ವಿಚಕ್ರ ವಾಹನ ಸವಾರನನ್ನು ಮಂಗಿಲಪದವು ನಿವಾಸಿ ಶೋಭಿತ್ ಕುಮಾರ್ ಪಿ ಎಂದು ಹೆಸರಿಸಲಾಗಿದೆ. ಇವರು ತನ್ನ ದ್ವಿಚಕ್ರ ವಾಹನದಲ್ಲಿ ವಿಟ್ಲದಿಂದ ಮಂಗಿಲಪದವಿನ ಪೊನ್ನೆತ್ತಡಿಗೆ ತೆರಳುತ್ತಿದ್ದ ವೇಳೆ ವೀರಕಂಭ ಗ್ರಾಮದ ಮಚ್ಚ ಎಂಬಲ್ಲಿ ಎದುರಿನಿಂದ ಕೆ ವಸಂತ ಎಂಬವರು ಚಲಾಯಿಸಿಕೊಂಡು ಬಂದ ಪಿಕಪ್ ವಾಹನ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ರಸ್ತೆಗೆ ಬಿದ್ದ ಶೋಭಿತ್ ಅವರು ಗಾಯಗೊಂಡಿದ್ದು, ಅವರನ್ನು ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಗಾಯಾಳು ಶೋಭಿತ್ ಅವರ ಚಿಕ್ಕಪ್ಪ ಹೊನ್ನಪ್ಪ ಗೌಡ ಅವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ವೀರಕಂಭ : ಪಿಕಪ್ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ ಸವಾರಗೆ ಗಾಯ Rating: 5 Reviewed By: karavali Times
Scroll to Top