ಬಂಟ್ವಾಳ, ಜುಲೈ 26, 2024 (ಕರಾವಳಿ ಟೈಮ್ಸ್) : ವಾಮದಪದವು ಸರಕಾರಿ ಪದವಿಪೂರ್ವ ಕಾಲೇಜಿನ ನೂತನ ಶೈಕ್ಷಣಿಕ ವರ್ಷದ ವಿಧ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪೋಕ್ಸೊ ಕಾಯಿದೆ, ಬಾಲ್ಯ ವಿವಾಹ ನಿಷೇಧ ಕಾಯಿದೆಯ ಬಗ್ಗೆ ಕಾನೂನು ಅರಿವು ಕಾರ್ಯಕ್ರಮವು ಗುರುವಾರ ನಡೆಯಿತು.
ಪೂಂಜಾಲಕಟ್ಟೆ ಪೊಲೀಸ್ ಠಾಣಾ ಪಿಎಸ್ಸೈ ಶ್ರೀಮತಿ ಓಮನ ಅವರು ಕಾಲೇಜು ವಿಧ್ಯಾರ್ಥಿ ಸಂಘ ಉದ್ಘಾಟಿಸಿ ಪೋಕ್ಸೋ ಕಾಯಿದೆ, ಬಾಲ್ಯ ವಿವಾಹ ನಿಷೇಧ ಕಾಯಿದೆ, ಮಾದಕ ದ್ರವ್ಯಗಳ ದುಷ್ಪರಿಣಾಮ ಹಾಗೂ ಟ್ರಾಫಿಕ್ ನಿಯಮಗಳ ಬಗ್ಗೆ ವಿಧ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾಲೇಜು ಉಪನ್ಯಾಸಕ ಸುಧಾಕರ ಪ್ರಭು ಅವರು ವಿದ್ಯಾರ್ಥಿ ಸಂಘಧ ಮಹತ್ವ ಹಾಗೂ ಜವಾಬ್ದಾರಿಯ ಕುರಿತು ವಿವರಿಸಿದರು. ಕಾಲೇಜು ಪ್ರಾಂಶುಪಾಲ ಶ್ರೀಧರ ಎಚ್ ಜಿ ಅವರು, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪೂಂಜಾಲಕಟ್ಟೆ ಪೊಲೀಸ್ ಠಾಣಾ ಎಎಸ್ಸೈ ಗಳಾದ ತಾರನಾಥ ಹಾಗೂ ನಾರಾಯಣ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ನಾಗರಾಜ ಶೆಟ್ಟಿ, ಹಂಝ ಬಸ್ತಿಕೋಡಿ, ಯಶೋಧರ ಶೆಟ್ಟಿ, ಕೆ ಪ್ರಭಾಕರ ಶೆಟ್ಟಿ, ರಮೇಶ ಶೆಟ್ಟಿ ಭಾಗವಹಿಸಿದ್ದರು.
ಕಾಲೇಜು ವಿದ್ಯಾರ್ಥಿ ಸಂಘದ ನಾಯಕ, ದ್ವಿತೀಯ ಕಲಾ ವಿಭಾಗದ ಪುನೀತ್ ಸ್ವಾಗತಿಸಿ, ಕಾರ್ಯದರ್ಶಿ, ದ್ವಿತೀಯ ವಾಣಿಜ್ಯ ವಿಭಾಗದ ಕು ಶ್ರೀನಿಧಿ ಜೆ ಶೆಟ್ಟಿ ವಂದಿಸಿದರು. ಆರೋಗ್ಯ ಹಾಗೂ ನೈರ್ಮಲ್ಯ ಕಾರ್ಯದರ್ಶಿ, ದ್ವಿತೀಯ ವಾಣಿಜ್ಯ ವಿಭಾಗದ ಕು ತೇಜಸ್ವಿನಿ ಕಾರ‍್ಯಕ್ರಮ ನಿರೂಪಿಸಿದರು.
ನಾಡಪ್ರಭು ಕೆಂಪೇಗೌಡ ದಿನಾಚರಣೆ ಪ್ರಯುಕ್ತ ನಡೆಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಕು ಬನಶ್ರೀ, ಶಿವರಾಜ್ ಹಾಗೂ ಹೃತ್ವಿಕ್ ಮತ್ತು ಚಿತ್ರಕಲಾ ಸ್ವರ್ಧೆಯಲ್ಲಿ ವಿಜೇತರಾದ ದ್ವಿತೀಯ ವಾಣಿಜ್ಯ ವಿಭಾಗದ ದೀಕ್ಷಿತ್, ದ್ವಿತೀಯ ಕಲಾ ವಿಭಾಗದ ಕು ವೈಭವಿ ಹಾಗೂ ಪ್ರಥಮ ವಿಜ್ಞಾನ ವಿಭಾಗದ ಕು ಸ್ಪಂದನಾ ಅವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
0 comments:
Post a Comment