ಗ್ರಾಮಾಂತರ ಪ್ರದೇಶಗಳ ಜಮೀನು ನಿವೇಶನ ವಿನ್ಯಾಸ ಅನುಮೋದನೆಗೆ ಜಿಲ್ಲಾ ಕೇಂದ್ರಕ್ಕೆ ಮಾತ್ರ ಅವಕಾಶ ನೀಡಿದ ಸರಕಾರದ ನೂತನ ನಿಯಮ ವಿರುದ್ದ ಕರಾವಳಿ ಶಾಸಕರ ತಗಾದೆ : ಸ್ಪೀಕರ್ ನೇತೃತ್ವದಲ್ಲಿ ಸಚಿವರು-ಅಧಿಕಾರಿಗಳ ಸಭೆ - Karavali Times ಗ್ರಾಮಾಂತರ ಪ್ರದೇಶಗಳ ಜಮೀನು ನಿವೇಶನ ವಿನ್ಯಾಸ ಅನುಮೋದನೆಗೆ ಜಿಲ್ಲಾ ಕೇಂದ್ರಕ್ಕೆ ಮಾತ್ರ ಅವಕಾಶ ನೀಡಿದ ಸರಕಾರದ ನೂತನ ನಿಯಮ ವಿರುದ್ದ ಕರಾವಳಿ ಶಾಸಕರ ತಗಾದೆ : ಸ್ಪೀಕರ್ ನೇತೃತ್ವದಲ್ಲಿ ಸಚಿವರು-ಅಧಿಕಾರಿಗಳ ಸಭೆ - Karavali Times

728x90

25 July 2024

ಗ್ರಾಮಾಂತರ ಪ್ರದೇಶಗಳ ಜಮೀನು ನಿವೇಶನ ವಿನ್ಯಾಸ ಅನುಮೋದನೆಗೆ ಜಿಲ್ಲಾ ಕೇಂದ್ರಕ್ಕೆ ಮಾತ್ರ ಅವಕಾಶ ನೀಡಿದ ಸರಕಾರದ ನೂತನ ನಿಯಮ ವಿರುದ್ದ ಕರಾವಳಿ ಶಾಸಕರ ತಗಾದೆ : ಸ್ಪೀಕರ್ ನೇತೃತ್ವದಲ್ಲಿ ಸಚಿವರು-ಅಧಿಕಾರಿಗಳ ಸಭೆ

ಸಮಸ್ಯೆಯ ಗಂಭೀರತೆಯ ಬಗ್ಗೆ “ಕರಾವಳಿ ಟೈಮ್ಸ್” ಕಳೆದ ಫೆಬ್ರವರಿಯಲ್ಲೇ ಜನಾಭಿಪ್ರಾಯ ಪ್ರಕಟಿಸಿ ಗಮನ ಸೆಳೆದಿತ್ತ್ತು


ಬಂಟ್ವಾಳ, ಜುಲೈ 25, 2024 (ಕರಾವಳಿ ಟೈಮ್ಸ್) : ಗ್ರಾಮ ಪಂಚಾಯತಿಗಳು ಹಾಗೂ ಸ್ಥಳೀಯ ಯೋಜನೆ ಪ್ರದೇಶದ ಹೊರ ಭಾಗದಲ್ಲಿರುವ ಒಂದು ಏಕರೆಗಿಂತ ಕಡಿಮೆ ಪ್ರದೇಶ ಮತ್ತು ಏಕ ನಿವೇಶನ ವಸತಿ ಹಾಗೂ ವಾಣಿಜ್ಯ ಸಂಬAಧ ಭೂ ಪರಿವರ್ತಿತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆಯ ಸಮಸ್ಯೆಗಳ ಪರಿಹಾರದ ಕುರಿತಾಗಿ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ನೇತೃತ್ವದಲ್ಲಿ ಗುರುವಾರ ನಡೆದ ಕರಾವಳಿ ಭಾಗದ ಶಾಸಕರ ಸಭೆಯಲ್ಲಿ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಅವರು ಭಾಗವಹಿಸಿ ಸಮಸ್ಯೆಗಳ ಗಂಭೀರತೆ ಬಗ್ಗೆ ವಿವರಿಸಿದರು. 

ಗ್ರಾಮ ಪಂಚಾಯತಿಗಳು ಹಾಗೂ ಸ್ಥಳೀಯ ಯೋಜನೆ ಪ್ರದೇಶದ ಹೊರ ಭಾಗದಲ್ಲಿರುವ ಒಂದು ಎಕರೆಗಿಂತ ಕಡಿಮೆ ಪ್ರದೇಶ ಮತ್ತು ಏಕ ನಿವೇಶನ ವಸತಿ ಹಾಗೂ ವಾಣಿಜ್ಯ ಸಂಬAಧ ಭೂ ಪರಿವರ್ತಿತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆ ನಗರ ಹಾಗೂ ಗ್ರಾಮಾಂತರ ಯೋಜನಾ ಪ್ರಾಧಿಕಾರಕ್ಕೆ ವಹಿಸಿರುವುದರಿಂದ ಕಾರ್ಯಭಾರದ ಒತ್ತಡದಿಂದ ಕಡತ ವಿಲೇವಾರಿಯಾಗದೆ ಬಂಟ್ವಾಳ ತಾಲೂಕಿನ ನೂರಾರು ಕಡತಗಳು ಬಾಕಿಯಿದ್ದು, ಸಾರ್ವಜನಿಕವಾಗಿ ಸಮಸ್ಯೆಗಳು ಉಂಟಾಗಿರುವ ಬಗ್ಗೆ ರಾಜೇಶ್ ನಾಯ್ಕ್ ಅವರು ಸಭೆಯಲ್ಲಿ ಸವಿವರವಾಗಿ ಪ್ರಸ್ತಾಪಿಸಿದರು.

ಈ ಹಿಂದೆ ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತಿಗಳಲ್ಲಿ ನೀಡಲಾಗುತ್ತಿದ್ದು, ಅದನ್ನು ಬದಲಾಯಿಸಿ ನಗರ ಮತ್ತು  ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ವಹಿಸಿರುವುದರಿಂದ ಕಾರ್ಯಭಾರದ ಒತ್ತಡದಿಂದ ಕಡತ ವಿಲೇವಾರಿ ವಿಳಂಬವಾಗಿ ಸಾರ್ವಜನಿಕವಾಗಿ ಸಮಸ್ಯೆಗಳು ಉಂಟಾಗಿರುತ್ತದೆ. ಇದನ್ನು ಬದಲಾಯಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಅಲ್ಲದೆ ಬಂಟ್ವಾಳ ತಾಲೂಕಿಗೆ ಸಂಬAಧಿಸಿದAತೆ ಕಡತಗಳನ್ನು ಬುಡಾ ವ್ಯಾಪ್ತಿಯಲ್ಲೇ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವ  ಬಗ್ಗೆ ಚರ್ಚಿಸಲಾಯಿತು. ಸಾರ್ವಜನಿಕ ಹಿತಾಸಕ್ತಿಯ ಬಗ್ಗೆ ಶಾಸಕರ ರಾಜೇಶ್ ನಾಯ್ಕ್ ಸಭೆಯಲ್ಲಿ ಪ್ರಸ್ತಾಪಿಸಿದ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಬೇಡಿಕೆ ಈಡೇರಿಸುವ ಭರವಸೆಯನ್ನು ಸ್ಪೀಕರ್ ಸಹಿತ ಸಚಿವರುಗಳು ನೀಡಿದರು.

ಸಭಾಧ್ಯಕ್ಷ ಯು ಟಿ ಖಾದರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ, ಪೌರಾಡಳಿತ ಸಚಿವ ರಹೀಂ ಖಾನ್, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ದೀಪಕ್ ಚೋಳನ್, ನಗರ ಮತ್ತು ಯೋಜನಾ ಪ್ರಾಧಿಕಾರದ ನಿರ್ದೇಶಕ ತಿಪ್ಪೇಸ್ವಾಮಿ ಸಹಿತ ಅಧಿಕಾರಿಗಳು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಶಾಸಕರುಗಳು ಭಾಗವಹಿಸಿದ್ದರು. 

ಗ್ರಾಮಾಂತರ ಪ್ರದೇಶಗಳಲ್ಲಿ ಸದ್ಯ 25 ಸೆಂಟ್ಸ್ ವರೆಗಿನ ಭೂಪರಿವರ್ತಿತ ಜಮೀನಿಗೆ ಗ್ರಾಮ ಪಂಚಾಯತ್ ಹಾಗೂ 1 ಎಕ್ರೆವರೆಗಿನ ಜಮೀನಿಗೆ ತಾಲೂಕು ಪಂಚಾಯತ್ ನೀಡುತ್ತಿದ್ದ ಏಕ ಹಾಗೂ ಬಹು ನಿವೇಶನ ವಿನ್ಯಾಸ ಅನುಮೋದನೆಯನ್ನು ಸರಕಾರದ ನೂತನ ನಿಯಮಾವಳಿಯಂತೆ ಮುಂದಕ್ಕೆ ಜಿಲ್ಲಾ ಕೇಂದ್ರದಲ್ಲಿರುವ ನಗರ ಹಾಗೂ ಗ್ರಾಮಾಂತರ ಯೋಜನಾ ನಿರ್ದೇಶಕರ ಕಚೇರಿಯಿಂದಲೇ ಪಡೆಯಬೇಕು ಎಂಬ ನಿಯಮದ ಬಗ್ಗೆ  ಸಾರ್ವಜನಿಕ ವಲಯದಲ್ಲಿ ಭುಗಿಲೆದ್ದ ಅಸಮಾಧಾನದ ಬಗ್ಗೆ ಕಳೆದ ಫೆಬ್ರವರಿ ತಿಂಗಳಲ್ಲೇ ಪತ್ರಿಕೆ ಜನಾಭಿಪ್ರಾಯ ಪ್ರಕಟಿಸಿ ಸಮಸ್ಯೆಯ ಗಂಭೀರತೆ ಬಗ್ಗೆ ಸಂಬAಧಪಟ್ಟವರ ಗಮನ ಸೆಳೆದಿತ್ತು. ... ಇದನ್ನು ಓದಿ .... https://www.karavalitimes.in/2024/02/Single-Multi-Layout-Problem-Public-Protest-Siddathe.html

  • Blogger Comments
  • Facebook Comments

0 comments:

Post a Comment

Item Reviewed: ಗ್ರಾಮಾಂತರ ಪ್ರದೇಶಗಳ ಜಮೀನು ನಿವೇಶನ ವಿನ್ಯಾಸ ಅನುಮೋದನೆಗೆ ಜಿಲ್ಲಾ ಕೇಂದ್ರಕ್ಕೆ ಮಾತ್ರ ಅವಕಾಶ ನೀಡಿದ ಸರಕಾರದ ನೂತನ ನಿಯಮ ವಿರುದ್ದ ಕರಾವಳಿ ಶಾಸಕರ ತಗಾದೆ : ಸ್ಪೀಕರ್ ನೇತೃತ್ವದಲ್ಲಿ ಸಚಿವರು-ಅಧಿಕಾರಿಗಳ ಸಭೆ Rating: 5 Reviewed By: karavali Times
Scroll to Top