ಬ್ರಹ್ಮರಕೂಟ್ಲು : ಶಾಲಾ ಬಸ್ಸಿಗೆ ಈಚರ್ ಲಾರಿ ಡಿಕ್ಕಿ ಹೊಡೆದು ಬಾಲಕಿ ಆಸ್ಪತ್ರೆಗೆ - Karavali Times ಬ್ರಹ್ಮರಕೂಟ್ಲು : ಶಾಲಾ ಬಸ್ಸಿಗೆ ಈಚರ್ ಲಾರಿ ಡಿಕ್ಕಿ ಹೊಡೆದು ಬಾಲಕಿ ಆಸ್ಪತ್ರೆಗೆ - Karavali Times

728x90

11 July 2024

ಬ್ರಹ್ಮರಕೂಟ್ಲು : ಶಾಲಾ ಬಸ್ಸಿಗೆ ಈಚರ್ ಲಾರಿ ಡಿಕ್ಕಿ ಹೊಡೆದು ಬಾಲಕಿ ಆಸ್ಪತ್ರೆಗೆ

ಬಂಟ್ವಾಳ, ಜುಲೈ 11, 2024 (ಕರಾವಳಿ ಟೈಮ್ಸ್) : ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಎಂಬಲ್ಲಿ ಮಕ್ಕಳನ್ನು ಹತ್ತಿಸಲು ರಸ್ತೆ ಬದಿ ನಿಲ್ಲಿಸಿದ್ದ ಶಾಲಾ ಬಸ್ಸಿಗೆ ಈಚರ್ ಲಾರಿ ಡಿಕ್ಕಿ ಹೊಡೆದು ಶಾಲಾ ಬಾಲಕಿಯೊಬ್ಬಳು ಗಾಯಗೊಂಡ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದೆ. 

ಕೊಣಾಜೆ ನಿವಾಸಿ, ಶಾಲಾ ಬಸ್ಸು ಚಾಲಕ ಮೊಹಮ್ಮದ್ ಸುಹೈಲ್ (25) ಅವರು ಕೆಎ20 ಬಿ 3707 ನೋಂದಣಿ ಸಂಖ್ಯೆಯ ಶಾಲಾ ಬಸ್ಸಿನ್ಲಿ ಮಕ್ಕಳನ್ನು ಕರೆದುಕೊಂಡು, ಬಿ ಸಿ ರೋಡು ಕಡೆಯಿಂದ ಬಬ್ಬುಕಟ್ಟೆಗೆ ತೆರಳುವ ಮಧ್ಯೆ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಎಂಬಲ್ಲಿ ಶಾಲಾ ಬಸ್ಸನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದಾಗ ವೆಂಕಟೇಶ್ ಅವರು ಚಲಾಯಿಸುತ್ತಿದ್ದ ಕೆಎ 53 ಡಿ 7263 ನೋಂದಣಿ ಸಂಖ್ಯೆಯ ಈಚರ್ ಲಾರಿ ಬಸ್ಸಿನ ಹಿಂಬದಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. 

ಅಪಘಾತದಿಂದ ಶಾಲಾ ಬಸ್ಸು ಒಮ್ಮೆಲೆ ಮುಂದಕ್ಕೆ ದೂಡಲ್ಪಟ್ಟು, ಬಸ್ಸಿಗೆ ಹತ್ತುತ್ತಿದ್ದ ಶಾಲಾ ಬಾಲಕಿ ಸಾರಾ ಇರಾನ್ ಇಬ್ರಾಹೀಂ ಬಸ್ಸಿನಿಂದ ಎಸೆಯಲ್ಪಟ್ಟು, ಗಾಯಗೊಂಡಿರುತ್ತಾರೆ. ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬ್ರಹ್ಮರಕೂಟ್ಲು : ಶಾಲಾ ಬಸ್ಸಿಗೆ ಈಚರ್ ಲಾರಿ ಡಿಕ್ಕಿ ಹೊಡೆದು ಬಾಲಕಿ ಆಸ್ಪತ್ರೆಗೆ Rating: 5 Reviewed By: karavali Times
Scroll to Top