ಬಂಟ್ವಾಳ : ಮಳೆ ಸಂಬಂಧಿ ಪ್ರಕರಣಗಳಿಂದ ಹಲವು ಮನೆಗಳಿಗೆ ಹಾನಿ, ಅಪಾರ ನಷ್ಟ - Karavali Times ಬಂಟ್ವಾಳ : ಮಳೆ ಸಂಬಂಧಿ ಪ್ರಕರಣಗಳಿಂದ ಹಲವು ಮನೆಗಳಿಗೆ ಹಾನಿ, ಅಪಾರ ನಷ್ಟ - Karavali Times

728x90

3 July 2024

ಬಂಟ್ವಾಳ : ಮಳೆ ಸಂಬಂಧಿ ಪ್ರಕರಣಗಳಿಂದ ಹಲವು ಮನೆಗಳಿಗೆ ಹಾನಿ, ಅಪಾರ ನಷ್ಟ

ಬಂಟ್ವಾಳ, ಜುಲೈ 03, 2024 (ಕರಾವಳಿ ಟೈಮ್ಸ್) : ತಾಲೂಕಿನ ಕೆಲವೆಡೆ ಮಳೆ ಹಾನಿ ಪ್ರಕರಣಗಳು ವರದಿಯಾಗಿವೆ. ಬಾಳ್ತಿಲ ಗ್ರಾಮದ ನಿವಾಸಿ ಕಮಲ ಕೋಂ ಶಿವಪ್ಪ ನಾಯ್ಕ ಅವರ ಮನೆಯ ಮೇಲೆ ಮರ ಬಿದ್ದು ಮನೆಯ ಒಂದು ಬದಿಗೆ ತೀವ್ರ ಹಾನಿಯಾಗಿರುತ್ತದೆ. ಕುರಿಯಾಳ ನಿವಾಸಿ ಜಗದೀಶ್ ರೈ ಬಿನ್ ಐತಪ್ಪ ರೈ ಅವರ ಮನೆ ಹಿಂಬದಿ ಬರೆ ಕುಸಿದಿರುತ್ತದೆ. ಗಡಿ ಕೊಪ್ಪಳ ನಿವಾಸಿ ಮಾರ್ಸೆಲ್ ಬೆನಡಿಕ್ಟ್ ಲೋಬೊ ಬಿನ್ ಅಲೆಕ್ಸ್ ಲೋಬೊ ಅವರ ಮನೆಗೆ ತೀವ್ರ ಹಾನಿಯಾಗಿರುತ್ತದೆ. ಸಂಗಬೆಟ್ಟು ಗ್ರಾಮದ ಸಿದ್ಧಕಟ್ಟೆ ಕೇಂದ್ರ ಮೈದಾನ ಬಳಿ ನಿವಾಸಿ ಮೋಹಿನಿ ಕೋಂ ಕಮಲಾಕ್ಷ ಗೌಡ ಅವರ ಮನೆಗೆ ಮರ ಬಿದ್ದು ಹಾನಿಯಾಗಿರುತ್ತದೆ. ಇರ್ವತ್ತೂರು ಗ್ರಾಮದ ಸುಮಿತ್ರ ಕೋಂ ಬೇಬಿ ಅವರ ಮನೆಗೆ ತೆಂಗಿನ ಮರ ಬಿದ್ದು ಭಾಗಶ ಹಾನಿಯಾಗಿರುತ್ತದೆ.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ಮಳೆ ಸಂಬಂಧಿ ಪ್ರಕರಣಗಳಿಂದ ಹಲವು ಮನೆಗಳಿಗೆ ಹಾನಿ, ಅಪಾರ ನಷ್ಟ Rating: 5 Reviewed By: karavali Times
Scroll to Top