ಬಂಟ್ವಾಳದಲ್ಲಿ ಮುಂದುವರಿದ ಮಳೆ ಹಾನಿ ಪ್ರಕರಣಗಳು : ಮನೆಗಳಿಗೆ ಡ್ಯಾಮೇಜ್ - Karavali Times ಬಂಟ್ವಾಳದಲ್ಲಿ ಮುಂದುವರಿದ ಮಳೆ ಹಾನಿ ಪ್ರಕರಣಗಳು : ಮನೆಗಳಿಗೆ ಡ್ಯಾಮೇಜ್ - Karavali Times

728x90

24 July 2024

ಬಂಟ್ವಾಳದಲ್ಲಿ ಮುಂದುವರಿದ ಮಳೆ ಹಾನಿ ಪ್ರಕರಣಗಳು : ಮನೆಗಳಿಗೆ ಡ್ಯಾಮೇಜ್

ಬಂಟ್ವಾಳ, ಜುಲೈ 24, 2024 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಬಿರುಗಾಳಿ ಸಹಿತ ಮಳೆ ಮುಂದುವರಿದಿದ್ದು, ಮಳೆ ಹಾನಿ ಪ್ರಕರಣಗಳೂ ಸರಣಿಯಾಗಿ ಮುಂದುವರಿದಿದೆ. ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಬಳಿ ಮೂಲೆ ನಿವಾಸಿ ಮೀನಾಕ್ಷಿ ಕೋಂ ನಾರಾಯಣ ನಾಯ್ಕ ಅವರ ವಾಸ್ತವ್ಯದ ಮನೆಯ ಒಂದು ಪಾಶ್ವಕ್ಕೆ ಮರ ಬಿದ್ದು ಹಾನಿಯಾಗಿದೆ. ಪುಣಚ ಗ್ರಾಮದ ಮೂಡಂಬೈಲು ನಿವಾಸಿ ಸರೋಜಿನಿ ಅವರ ವಾಸ್ತವ್ಯದ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಅಮ್ಮುಂಜೆ ಗ್ರಾಮದ ನಿವಾಸಿ ಪ್ರೇಮಲತಾ ಅವರ ಮನೆಗೆ ಹೊಂದಿಕೊAಡಿರುವ ಕೊಠಡಿಯ ಗೋಡೆ ಕುಸಿದು ಬಿದ್ದಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಮುಂದುವರಿದ ಮಳೆ ಹಾನಿ ಪ್ರಕರಣಗಳು : ಮನೆಗಳಿಗೆ ಡ್ಯಾಮೇಜ್ Rating: 5 Reviewed By: karavali Times
Scroll to Top