ಬಂಟ್ವಾಳ, ಜುಲೈ 15, 2024 (ಕರಾವಳಿ ಟೈಮ್ಸ್) : ಪುಣಚ ಗ್ರಾಮದ ಅಜ್ಜಿನಡ್ಕ ನಿವಾಸಿ ಸುಬ್ಬ ಪಾಟಾಳಿ ಬಿನ್ ಶಂಕರ ಪಾಟಾಳಿ ಅವರ ವಾಸ್ತವ್ಯದ ಮನೆಗೆ ತೆಂಗಿನ ಮರ ಬಿದ್ದು ತೀವ್ರ ಹಾನಿಯಾಗಿದೆ. ಅಮ್ಟಾಡಿ ಗ್ರಾಮದ ಕಲಾಯಿಕೋಡಿ ನಿವಾಸಿ ಚಂದ್ರಶೇಖರ ಬಿನ್ ತ್ಯಾಂಪ ಅವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.
ಬಂಟ್ವಾಳ ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಸೋಮವಾರ ತೀವ್ರವಾದ ಗಾಳಿಯೂ ಬೀಸುತ್ತಿದೆ. ತಾಲೂಕಿನ ಜೀವನದಿ ಸೋಮವಾರದಿಂದ ಉಕ್ಕಿ ಹರಿಯುತ್ತಿದ್ದು, ಸದ್ಯ ನದಿ ನೀರಿನ ಮಟ್ಟ 6 ಮೀಟರ್ ಮೀರಿ ಹರಿಯುತ್ತಿದೆ. 8.5 ಮೀಟರ್ ಇಲ್ಲಿನ ಸಾಧಾರಣ ಅಪಾಯದ ಮಟ್ಟ ಎಂದು ತಾಲೂಕಾಡಳಿತ ಘೋಷಿಸಿದ್ದು, ನದೀ ಪಾತ್ರ ಹಾಗೂ ತಗ್ಗು ಪ್ರದೇಶದ ನಿವಾಸಿಗಳಿಗೆ ಈಗಾಗಲೇ ಕಟ್ಟೆಚ್ಚರ ಪಾಲಿಸುವಂತೆ ಸೂಚಿಸಲಾಗಿದೆ. ಅಪಾಯದ ಪ್ರದೇಶದ ಜನರನ್ನು ಮಳೆ ಅಬ್ಬರ ಕಡಿಮೆಯಾಗುವವರೆಗೆ ಸ್ಥಳಾಂತರಗೊಳ್ಳುವಂತೆ ತಾಲೂಕಾಡಳಿತ ಸೂಚಿಸಿದೆ.
0 comments:
Post a Comment