ನೆಹರುನಗರ : ಆಜಾದ್ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾಗಿ ಎನ್ ಬಶೀರ್ ಅಹ್ಮದ್, ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಆಯ್ಕೆ - Karavali Times ನೆಹರುನಗರ : ಆಜಾದ್ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾಗಿ ಎನ್ ಬಶೀರ್ ಅಹ್ಮದ್, ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಆಯ್ಕೆ - Karavali Times

728x90

20 July 2024

ನೆಹರುನಗರ : ಆಜಾದ್ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾಗಿ ಎನ್ ಬಶೀರ್ ಅಹ್ಮದ್, ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಆಯ್ಕೆ

ಬಂಟ್ವಾಳ, ಜುಲೈ 20, 2024 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ನೆಹರುನಗರದ ಆಜಾದ್ ಫ್ರೆಂಡ್ಸ್ ಸರ್ಕಲ್ (ರಿ) ಇದರ ನೂತನ ಅಧ್ಯಕ್ಷರಾಗಿ ಎನ್ ಬಶೀರ್ ಅಹ್ಮದ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಅವರು ಆಯ್ಕೆಯಾಗಿದ್ದಾರೆ. 

ಇಲ್ಲಿನ ಸಂಸ್ಥೆಯ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ. ಅಧ್ಯಕ್ಷ ಅಬ್ದುಲ್ ಖಾದರ್ ಸಭೆಯನ್ನು ಉದ್ಘಾಟಿಸಿದರು. ಕಾರ್ಯದರ್ಶಿ ಶಾನವಾಝ್ ವಾರ್ಷಿಕ ವರದಿ ಮಂಡಿಸಿದರು.

ಬಳಿಕ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಗೌರವಾಧ್ಯಕ್ಷರಾಗಿ ಪಿ ಅಬೂಬಕ್ಕರ್, ಉಪಾಧ್ಯಕ್ಷರಾಗಿ ಅಬ್ದುಲ್ ನಾಸೀರ್, ಅಬ್ದುಲ್ ಸಲೀಂ, ಜೊತೆ ಕಾರ್ಯದರ್ಶಿಗಳಾಗಿ ಶಂಶೀರ್, ಇರ್ಶಾದ್ ಡಿಎಸ್‍ಐಬಿ, ಕೋಶಾಧಿಕಾರಿಯಾಗಿ ಅಝರ್ ಎಸ್ ಎ ಅವರನ್ನು ಆರಿಸಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ರಝಾಕ್ ಪಿ ಎಸ್, ಶಾನವಾಝ್, ಇಸ್ಮಾಯಿಲ್, ಇಜಾಝ್ ಅಹ್ಮದ್, ರಫೀಕ್ ಪಿ ಜೆ, ಜುನೈದ್, ಹನೀಫ್ ಅವರನ್ನು ನೇಮಿಸಲಾಯಿತು. 

  • Blogger Comments
  • Facebook Comments

0 comments:

Post a Comment

Item Reviewed: ನೆಹರುನಗರ : ಆಜಾದ್ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾಗಿ ಎನ್ ಬಶೀರ್ ಅಹ್ಮದ್, ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಆಯ್ಕೆ Rating: 5 Reviewed By: karavali Times
Scroll to Top