ಮಾರ್ನಬೈಲ್ : ಸ್ಕೂಟರ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆಗೆ ಗಾಯ - Karavali Times ಮಾರ್ನಬೈಲ್ : ಸ್ಕೂಟರ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆಗೆ ಗಾಯ - Karavali Times

728x90

7 July 2024

ಮಾರ್ನಬೈಲ್ : ಸ್ಕೂಟರ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆಗೆ ಗಾಯ

ಬಂಟ್ವಾಳ, ಜುಲೈ 07, 2024 (ಕರಾವಳಿ ಟೈಮ್ಸ್) : ಸ್ಕೂಟರ್ ಡಿಕ್ಕಿ ಹೊಡೆದು ಪಾದಚಾರಿ ಮಹಿಳೆ ಗಾಯಗೊಂಡು ಅಸ್ಪತ್ರೆಗೆ ದಾಖಲಾದ ಘಟನೆ ಸಜಿಪನಡು ಗ್ರಾಮದ ಸುರಭಿ ಬಾರ್ ಆಂಡ್ ರೆಸ್ಟೋರೆಂಟ್ ಬಳಿ ಶನಿವಾರ ಸಂಜೆ ಸಂಭವಿಸಿದೆ. 

ಗಾಯಗೊಂಡ ಮಹಿಳೆಯನ್ನು ಝರೀನಾ ಎಂದು ಹೆಸರಿಸಲಾಗಿದೆ. ಆರೋಪಿ ಸ್ಕೂಟರ್ ಸವಾರನನ್ನು ಧನಂಜಯ ಎಂದು ಹೆಸರಿಸಲಾಗಿದೆ. ದನಂಜಯ ಅವರು ಶನಿವಾರ ಸಂಜೆ ಸ್ಕೂಟರಿನಲ್ಲಿ ಮುಡಿಪು-ಮೆಲ್ಕಾರ್ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿರುವ ವೇಳೆ ಸಜಿಪನಡು ಗ್ರಾಮದ ಮಾರ್ನಬೈಲು ಸಮೀಪದ ಸುರಭಿ ಬಾರ್ ಆಂಡ್ ರೆಸ್ಟೋರೆಂಟ್ ಬಳಿ ರಸ್ತೆ ದಾಟುತ್ತಿದ್ದ ಝರೀನಾ ಅವರಿಗೆ ಡಿಕ್ಕಿ ಹೊಡೆದಿದೆ. 

ಅಪಘಾತದಿಂದ ಗಾಯಗೊಂಡ ಝರೀನಾ ಅವರನ್ನು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಸಜಿಪನಡು ನಿವಾಸಿ ವಿವೇಕಾನಂದ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಾರ್ನಬೈಲ್ : ಸ್ಕೂಟರ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆಗೆ ಗಾಯ Rating: 5 Reviewed By: karavali Times
Scroll to Top