ಬಂಟ್ವಾಳ, ಜುಲೈ 11, 2024 (ಕರಾವಳಿ ಟೈಮ್ಸ್) : ಚಾಲಕನ ನಿಯಂತ್ರಣ ಮೀರಿ ಕಾರು ರಸ್ತೆ ಬದಿಯ ಕಮರಿಗೆ ಉರುಳಿ ಬಿದ್ದು ಚಾಲಕ ಸಹಿತ ಆರು ಮಂದಿ ಗಾಯಗೊಂಡ ಘಟನೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಡಂತ್ಯಾರು ಸಮೀಪದ ಮಾಲಾಡಿ ಎಂಬಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.
ಗಾಯಗೊಂಡವರನ್ನು ಕಾರು ಚಾಲಕ ಅಬ್ದುಲ್ ಹಮೀದ್, ಅವರ ಪತ್ನಿ ಶ್ರೀಮತಿ ಶಬಾನ, ಹಮೀದ್ ಅವರ ತಾಯಿ ಶ್ರೀಮತಿ ಜೈನಾಬಿ, ಶ್ರೀಮತಿ ಆಮೀನಾ, ಅಬ್ದುಲ್ ಹಮೀದ್ ಅವರ ಮಗಳು ಫಾತಿಮಾ ಝಿದಾ
ಎಂದು ಹೆಸರಿಸಲಾಗಿದೆ.
ಕಾರು ಚಾಲಕ ಅಬ್ದುಲ್ ಹಮೀದ್ ಅವರು ಕುಟುಂಬ ಸಮೇತವಾಗಿ ಹೋಗುತ್ತಿದ್ದ ವೇಳೆ ನಿಯಂತ್ರಣ ಮೀರಿ ಮಾಲಾಡಿ ಗ್ರಾಮ ಮಡಂತ್ಯಾರು ಬಳಿ ರಸ್ತೆ ಬದಿಯ 15 ಅಡಿ ಆಳ ಕಮರಿಗೆ ಉರುಳಿ ಬಿದ್ದು ಈ ಅಪಘಾತ ಸಂಭವಿಸಿದೆ.
ಕಾರಿನ ಹಿಂದೆ ಬರುತ್ತಿದ್ದ ಅವರ ಸಂಬಂಧಿ ಝಕರಿಯಾ ಎಂಬವರು ಇತರ ಸಾರ್ವಜನಿಕರ ಸಹಕಾರದೊಂದಿಗೆ ತÀನ್ನ ಕಾರನ್ನು ನಿಲ್ಲಿಸಿ ಅಪಘಾತಗೊಂಡ ಕಾರಿನ ಒಳಗೆ ಸಿಲುಕಿದವರನ್ನು ಹೊರಗೆ ತೆಗೆದು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment