ಬಂಟ್ವಾಳ, ಜುಲೈ 19, 2024 (ಕರಾವಳಿ ಟೈಮ್ಸ್) : ಶಾಮಿಯಾನ ವ್ಯವಹಾರದ ಲಾರಿ ಮಗುಚಿ ಬಿದ್ದು ಓರ್ವ ಮೃತಪಟ್ಟು ಚಾಲಕ ಸಹಿತ ನಾಲ್ಕು ಮಂದಿ ಮೃತಪಟ್ಟ ಘಟನೆ ಪಿಲಾತಬೆಟ್ಟು ಗ್ರಾಮದ ಪೂಂಜಾಲಕಟ್ಟೆ ಸಮೀಪದ ದೈಕಿನಕಟ್ಟೆ ಶ್ರೀ ರಾಮಾಂಜನೇಯ ಭಜನಾ ಮಂದಿರದ ಬಳಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.
ಮೃತ ಪ್ರಯಾಣಿಕನನ್ನು ಕಾರ್ತಿಕ್ ಎಂದು ಹೆಸರಿಸಲಾಗಿದ್ದು, ಗಾಯಾಳುಗಳನ್ನು ಲಾರಿ ಚಾಲಕ ಉಮರ್, ಮತ್ತೋರ್ವ ಪ್ರಯಾಣಿಕ ಅಖಿಲೇಶ್, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮನೀಶ್ ಹಾಗೂ ಸಂದೀಪ್ ಎಂದು ಗುರುತಿಸಲಾಗಿದೆ.
ಮಧ್ವದ ರವಿ ಎಂಟರ್ ಪ್ರೈಸಸ್ ಆಂಡ್ ಅರೇಂಜರ್ಸ್ ಎಂಬ ಶಾಮಿಯಾನ ಅಂಗಡಿಗೆ ಸೇರಿದ ಲಾರಿಯಾಗಿದ್ದು, ಚಾಲಕ ಉಮ್ಮರ್ ಹಾಗೂ ಇಬ್ಬರು ಕೆಲಸಗಾರರಾದ ಅಖಿಲೇಶ್ ಹಾಗೂ ಕಾರ್ತಿಕ್ ಅವರೊಂದಿಗೆ ಸೇರಿಕೊಂಡು ಸಂಚರಿಸುತ್ತಿದ್ದ ವೇಳೆ ಪೂಂಜಾಲಕಟ್ಟೆ ಸಮೀಪದಲ್ಲಿ ಚಾಲಕನ ನಿಯಂತ್ರಣ ಮೀರಿ ರಸ್ತೆ ಬದಿ ಉರುಳಿ ಬಿದ್ದಿದೆ. ಈ ವೇಳೆ ಚಾಲಕ ಸಹಿತ ಕೆಲಸಗಾರರು ಲಾರಿಯೊಳಗೆ ಸಿಲುಕಿ ಗಾಯಗೊಂಡಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮನೀಶ್ ಹಾಗೂ ಸಂದೀಪ್ ಅವರಿಗೂ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಪೂಂಜಾಲಕಟ್ಟೆ ಸರಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅದಾಗಲೇ ಕಾರ್ತಿಕ್ ಮೃತಪಟ್ಟಿದ್ದಾರೆ. ಉಳಿದ ಗಾಯಾಳುಗಳನ್ನು ಮಂಗಳೂರು ಎ ಜೆ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment