ಬಂಟ್ವಾಳ, ಜುಲೈ 07, 2024 (ಕರಾವಳಿ ಟೈಮ್ಸ್) : ಮನೆಯ ಹಿಂಬಾಗಿಲ ಚಿಲಕ ಮುರಿದು ಒಳಪ್ರವೇಶಿಸಿದ ಕಳ್ಳರು ಮನೆಯಲ್ಲಿ ಮಲಗಿದ್ದ ವೃದ್ದೆ ತಾಯಿ ಧರಿಸಿದ್ದ ಚಿನ್ನಾಭರಣ ಕಳವುಗೈದ ಘಟನೆ ವಿಟ್ಲಪಡ್ನೂರು ಗ್ರಾಮದ ಪಳ್ಳಿಗದ್ದೆ ಎಂಬಲ್ಲಿ ಭಾನುವಾರ ಬೆಳಗ್ಗಿನ ಜಾವ ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ ಬಿ ಎಂ ಇಬ್ರಾಹಿಂ (62) ಅವರು ಈ ಬಗ್ಗೆ ವಿಟ್ಲ ಪೊಲೀಸರಿಗೆ ದೂರು ನೀಡಿದ್ದು, ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗಿನ ಜಾವದ ಮಧ್ಯದ ಅವಧಿಯಲ್ಲಿ ಪಳ್ಳಿಗದ್ದೆ ಎಂಬಲ್ಲಿರುವ ಇವರ ಸಹೋದರನ ವಾಸ್ತವ್ಯದ ಮನೆಯ ಹಿಂಬಾಗಿಲ ಕಿಟಕಿಯ ಸರಳನ್ನು ಯಾರೋ ಕಳ್ಳರು ಯಾವುದೋ ಸಾಧನದಿಂದ ಮುರಿದು, ನಂತರ ಅದೇ ಕಿಟಕಿಯ ಮೂಲಕ ಯಾವುದೋ ಸಾಧನದಿಂದ ಮನೆಯ ಹಿಂಬದಿಯ ಬಾಗಿಲನ್ನು ತೆರೆದು ಮನೆಯ ಒಳಗೆ ಪ್ರವೇಶಿಸಿ ಮನೆಯ ಕೋಣೆಯಲ್ಲಿ ನಿಶ್ಯಕ್ತರಾಗಿ ಮಲಗಿದ್ದ ತಾಯಿ ಐಸಮ್ಮ ಅವರು ಧರಿಸಿದ್ದ ಸುಮಾರು 8 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿರುತ್ತಾರೆ. ಕಳ್ಳತನವಾಗಿರುವ ಆಭರಣಗಳ ಮೌಲ್ಯ ಸುಮಾರು 48 ಸಾವಿರ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
0 comments:
Post a Comment