ಬಂಟ್ವಾಳದಲ್ಲಿ ಮಳೆ ಬಿರುಸು : ಮೂಡನಡುಗೋಡು, ಶಂಭೂರು, ಬಿಳಿಯೂರಿನಲ್ಲಿ ಮನೆಗಳಿಗೆ ಹಾನಿ - Karavali Times ಬಂಟ್ವಾಳದಲ್ಲಿ ಮಳೆ ಬಿರುಸು : ಮೂಡನಡುಗೋಡು, ಶಂಭೂರು, ಬಿಳಿಯೂರಿನಲ್ಲಿ ಮನೆಗಳಿಗೆ ಹಾನಿ - Karavali Times

728x90

8 July 2024

ಬಂಟ್ವಾಳದಲ್ಲಿ ಮಳೆ ಬಿರುಸು : ಮೂಡನಡುಗೋಡು, ಶಂಭೂರು, ಬಿಳಿಯೂರಿನಲ್ಲಿ ಮನೆಗಳಿಗೆ ಹಾನಿ

ಬಂಟ್ವಾಳ, ಜುಲೈ 08, 2024 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದ್ದು, ಕೆಲವೆಡೆ ಮಳೆ ಹಾನಿ ಪ್ರಕರಣಗಳು ಮುಂದುವರಿದಿದೆ. ಮೂಡನಡುಗೋಡು ಗ್ರಾಮದ ಕರೆಂಕಿ ನಿವಾಸಿ ದೇವಕಿ ಕೋಂ ಲಕ್ಷ್ಮಣ್  ಮೂಲ್ಯ ಅವರ ವಾಸ್ತವ್ಯದ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. 

ಶಂಭೂರು ಗ್ರಾಮದ ನಿವಾಸಿ ಮೋಹನದಾಸ ಬಿನ್ ವಾಸಪ್ಪ ಪೂಜಾರಿ ಅವರ ವಾಸ್ತವ್ಯದ ಕಚ್ಚಾ ಮನೆಗೆ ತೀವ್ರ ಹಾನಿಯಾಗಿದ್ದು ಮನೆ ಮಂದಿಯನ್ನು ಸ್ಥಳಾಂತರಿಸಲಾಗಿದೆ. ಬಿಳಿಯೂರು ಗ್ರಾಮದ ಪೆಜಕೊಡೆ ನಿವಾಸಿ ಸುಂದರಿ ಅವರ ವಾಸ್ತವ್ಯದ ಮನೆಯ ಒಂದು ಪಾರ್ಶ್ವದ ಗೋಡೆ ಹಾಗೂ ಮೇಲ್ಭಾವಣಿ ಕುಸಿದು ತೀವ್ರ ಹಾನಿಯಾಗಿದೆ. ಇಲ್ಲಿ ಕೂಡಾ ಮನೆ ಮಂದಿಯನ್ನು ಸಂಬಂಧಿಕರ ಮನೆಗೆ ಸ್ಥಳಂತರಿಸಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಮಳೆ ಬಿರುಸು : ಮೂಡನಡುಗೋಡು, ಶಂಭೂರು, ಬಿಳಿಯೂರಿನಲ್ಲಿ ಮನೆಗಳಿಗೆ ಹಾನಿ Rating: 5 Reviewed By: karavali Times
Scroll to Top