ಬಂಟ್ವಾಳ, ಜುಲೈ 24, 2024 (ಕರಾವಳಿ ಟೈಮ್ಸ್) : ತಾಲೂಕಿನ ವಿವಿಧೆಡೆ ಮಂಗಳವಾರ ರಾತ್ರಿ ಸುಮಾರು 9.30ರ ವೇಳೆಗೆ ಹಠಾತ್ ಭಾರಿ ಭಿರುಗಾಳಿ ಬೀಸಿದ್ದು, ಹಲವೆಡೆ ಪರಿಣಾಮ ಭೀರಿದೆ. ಬಿ ಸಿ ರೋಡು ಮುಖ್ಯ ವೃತ್ತದ ಬಳಿ ಎರಡು-ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಅಲ್ಲೇ ಸಮೀಪದಲ್ಲಿ ರಸ್ತೆ ಬದಿಯ ಬೃಹತ್ ಮರವೊಂದು ಉರುಳಿದೆ. ಪರಿಣಾಮ ಬಿ ಸಿ ರೋಡು ಮುಖ್ಯ ಪೇಟೆಯಲ್ಲಿ ಹಠಾತ್ ವಾಹನ ಸಂಚಾರ ಬಾಧಿತವಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಮೆಸ್ಕಾಂ, ಪೊಲೀಸ್, ಕಂದಾಯ, ಅಗ್ನಿಶಾಮಕ ಇಲಾಖಾಧಿಕಾರಿಗಳು ಸಿಬ್ಬಂದಿಗಳ ಸಹಿತ ಸ್ಥಳಕ್ಕಾಗಮಿಸಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರ ನಿರ್ಬಂಧಿಸಿ ಯಾವುದೇ ಅನಾಹುತ, ಅಪಾಯಗಳು ಉಂಟಾಗದAತೆ ಮುಂಜಾಗ್ರತಾ ಕ್ರಮ ಕೈಗೊಂಡರು. ಪೂರ್ಣ ಪ್ರಮಾಣದಲ್ಲಿ ಅಪಾಯ ತಪ್ಪಿದೆ ಎಂದು ಗೊತ್ತಾದ ಬಳಿಕವೇ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಮರ, ವಿದ್ಯುತ್ ಕಂಬ, ತಂತಿಗಳ ತೆರವು ಕಾರ್ಯ ಕೈಗೊಂಡಿದ್ದು, ಕಡಿತಗೊಂಡಿರುವ ವಿದ್ಯುತ್ ಮರು ಸಂಪರ್ಕಕ್ಕೆ ಕೆಲಸ-ಕಾರ್ಯಗಳನ್ನು ಚಾಲ್ತಿಯಲ್ಲಿರಿಸಲಾಗಿದೆ. ಬಿ ಸಿ ರೋಡು ಆಸು-ಪಾಸಿನಲ್ಲಿ ಪೂರ್ಣವಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಬಂಟ್ವಾಳ, ಪಾಣೆಮಂಗಳೂರು ಮೊದಲಾದೆಡೆಗಳಲ್ಲಿ ಮಧ್ಯ ರಾತ್ರಿ ವೇಳೆಗೆ ವಿದ್ಯುತ್ ಮರುಸಂಪರ್ಕಗೊಳಿಸಲಾಗಿದೆ. ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ವಿವಿಧ ಇಲಾಖಾಧಿಕಾರಿಗಳ ಜೊತೆ ಸ್ಥಳೀಯ ಸಾರ್ವಜನಿಕರೂ ಕೂಡಾ ಕೈಜೋಡಿಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ. ಪರಿಣಾಮ ಸಂಭಾವ್ಯ ಅಪಾಯಗಳು ಸ್ವಲ್ಪದರಲ್ಲೇ ತಪ್ಪಿ ಹೋಗಿದ್ದು, ಅಧಿಕಾರಿಗಳು ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಇದಲ್ಲದೆ ಅಲ್ಲಲ್ಲಿ ಮನೆ-ಅಂಗಡಿಗಳ ಶೀಟುಗಳು ಹಾರಿಹೋಗಿದ್ದು, ಅಂಗಡಿಗಳ ಬೋರ್ಡ್ಗಳು, ರಸ್ತೆ ಬದಿ ಅಳವಡಿಸಲಾಗಿರುವ ಬ್ಯಾನರ್, ಫ್ಲೆಕ್ಸ್ ಗಳು ಕೂಡಾ ನೆಲಕ್ಕರುಳಿದ ಬಗ್ಗೆ ಮಾಹಿತಿಗಳು ಲಭ್ಯವಾಗಿದೆ.
0 comments:
Post a Comment