ಬೆಳ್ತಂಗಡಿ, ಜುಲೈ 28, 2024 (ಕರಾವಳಿ ಟೈಮ್ಸ್) : ಅಂಗಡಿಯ ಹೊರಗೆ ಸಿಟೌಟಿನಲ್ಲಿ ಕುಳಿತಿದ್ದ ವ್ಯಕ್ತಿಗೆ ಕಾರಿನಲ್ಲಿ ಬಂದ ತಂಡವೊಂದು ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುವ ಘಟನೆ ತಾಲೂಕಿನ ಕಣಿಯೂರು ಗ್ರಾಮದ ಕಣಿಯೂರು ಕಸಬಾ ಎಂಬಲ್ಲಿ ಭಾನುವಾರ ಮಧ್ಯಾಹ್ನ ವೇಳೆ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ಪ್ರವೀಣ (26) ಎಂದು ಹೆಸರಿಸಲಾಗಿದೆ. ಆರೋಪಿಗಳನ್ನು ಪರಿಚಯದ ರಾಧಾಕೃಷ್ಣ, ಪ್ರಜ್ವ¯, ಕಿರಣ್ ಶಿಶಿಲ ಹಾಗೂ ಪರಿಚಯವಿಲ್ಲದ 5 ಜನರು ಎಂದು ಹೇಳಲಾಗಿದೆ.
ಭಾನುವಾರ ಮಧ್ಯಾಹ್ನ ಪ್ರವೀಣ ಅವರು ಕಣಿಯೂರು ಕಸಬಾ ಎಂಬಲ್ಲಿರುವ ಅಂಗಡಿಯ ಹೊರಗೆ ಸಿಟೌಟಿನಲ್ಲಿ ಕುಳಿತಿದ್ದ ವೇಳೆ ಅಲ್ಲಿಗೆ ಮಾರುತಿ ಶಿಫ್ಟ್ ಕಾರಿನಲ್ಲಿ ಬಂದ ಆರೋಪಿಗಳು ಅವ್ಯಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಆರೋಪಿಗಳ ಪೈಕಿ ಪ್ರಜ್ವಲ್ ಎಂಬಾತ ಅವಾಚ್ಯ ಶಬ್ದಗಳಿಂದ ಬೈದಿದ್ದು, ಮತ್ತೋರ್ವ ಆರೋಪಿ ಕಿರಣ್ ಎಂಬಾತ ಆತನ ಕೈಯಲ್ಲಿದ್ದ ಕಬ್ಬಿಣದ ಕ್ರಾಂಕ್ರಿಟ್ ರಾಡಿನಿಂದ ಹಲ್ಲೆ ನಡೆಸಿರುತ್ತಾನೆ. ಇತರ ಆರೋಪಿಗಳಾದ ಪ್ರಜ್ವಲ್, ರಾಧಕೃಷ್ಣ ಮತ್ತು ಅವರ ಜೊತೆಯಲ್ಲಿ ಬಂದಿದ್ದ ಇನ್ನಿಬ್ಬರು ಕೈಗಳಿಂದ ಹಲ್ಲೆ ಮಾಡಿದ್ದು, ಬಳಿಕ ಜೀವ ಬೆದರಿಕೆಯೊಡ್ಡಿ ತೆರಳಿರುತ್ತಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 88/2024 ಕಲಂ 189(2), 191(2), 191(3), 352, 115(2), 118(1), 329(4), 351(2) ಜೊತೆಗೆ 190 ಬಿ ಎನ್ ಎಸ್ 2023 ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment