ಪುತ್ತೂರು, ಜುಲೈ 25, 2024 (ಕರಾವಳಿ ಟೈಮ್ಸ್) : ಜಾಗದ ವಿಷಯದಲ್ಲಿರುವ ಮನಸ್ತಾಪಕ್ಕೆ ಸಂಬAಧಿಸಿದAತೆ ದಂಪತಿ ಸೇರಿ ತಾಯಿ-ಮಗನಿಗೆ ಹಲ್ಲೆ ನಡೆಸಿ, ಅವಾಚ್ಯವಾಗಿ ಬೈದು ಜೀವಬೆದರಿಕೆ ಒಡ್ಡಿರುವ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಅರಿಯಡ್ಕ ಗ್ರಾಮದ ನಿವಾಸಿ ಅರುಣ್ ಕುಮಾರ್ (37) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರಿಗೂ ಅವರ ನೆರೆಯ ಸಂಬAಧಿಕ ನಾಗೇಶ್ ಮಣಿಯಾಣಿ ಅವರ ಮಧ್ಯೆ ಜಾಗದ ವಿಚಾರದಲ್ಲಿ ಮನಸ್ತಾಪವಿದ್ದು, ಬುಧವಾರ ಅರುಣ್ ಕುಮಾರ್ ಅವರು ಅವರಿಗೆ ಸೇರಿದ ಜಾಗದಲ್ಲಿ ಹಲಸಿನ ಹಣ್ಣು ತೆಗೆಯುತ್ತಿರುವಾಗ ಆರೋಪಿಗಳಾದ ನಾಗೇಶ್ ಹಾಗೂ ಆತನ ಹೆಂಡತಿ ಯಶೋಧ ಅವರು ಬಂದು ಅರುಣ್ ಕುಮಾರ್ ಹಾಗೂ ಅವರ ತಾಯಿ ಜಯಲಕ್ಷಿö್ಮ ಅವರನ್ನುದ್ದೇಶಿಸಿ ಅವಾಚ್ಯವಾಗಿ ಬೈದಿರುತ್ತಾರೆ. ಈ ಬಗ್ಗೆ ಪ್ರಶ್ನಿಸಿದಾಗ ಅರುಣ್ ಕುಮಾರ್ ಅವರಿಗೆ ಹಲ್ಲೆ ನಡೆಸಿರುತ್ತಾರೆ. ಈ ಸಂಧರ್ಭ ಅವರ ತಾಯಿ ಬಿಡಿಸಲು ಬಂದಾಗ ಆರೋಪಿ ನಾಗೇಶ್ ಮಣಿಯಾಣಿ ಅರುಣ್ ಕುಮಾರ್ ಅವರನ್ನು ಕತ್ತಿಯಿಂದ ಕಡಿಯುವುದಾಗಿ ಬೆದರಿಕೆ ಒಡ್ಡಿರುತ್ತಾನೆ. ಹಲ್ಲೆಯಿಂದ ಗಾಯಗೊಂಡ ಅರುಣ್ ಕುಮಾರ್ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 85/2024 ಕಲಂ 352, 118(1), 115(2), 351(2) ಜೊತೆಗೆ 3(5) ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿದೆ.
0 comments:
Post a Comment