ಪುತ್ತೂರು, ಜುಲೈ 01, 2024 (ಕರಾವಳಿ ಟೈಮ್ಸ್) : ಹಳೆ ವೈಷಮ್ಯದಿಂದ ಸ್ಕೂಟರಿನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ತಡೆದ ಎಂಟು ಮಂದಿಯ ತಂಡ ಗುಂಪು ಹಲ್ಲೆ ನಡೆಸಿದ ಘಟನೆ ಒಳಮೊಗ್ರ ಗ್ರಾಮದ ಕುಟ್ಟಿನೋಪಿನಡ್ಕ ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಉಳಿಯಡ್ಕ ನಿವಾಸಿ ಅಬ್ದುಲ್ ರಹಿಮಾನ್ (37) ಎಂದು ಹೆಸರಿಸಲಾಗಿದೆ. ಆರೋಪಿಗಳನ್ನು ನಾಶೀರ್, ಇರ್ಶಾದ್, ಸಫ್ವಾನ್, ಮುಸ್ತಫ, ರಶೀದ್, ಜಾಫರ್, ಕಬೀರ್ ಹಾಗೂ ನಾಶೀರ್ ಎಂದು ಗುರುತಿಸಲಾಗಿದೆ.
ಅಬ್ದುಲ್ ರಹಿಮಾನ್ ಅವರು ಭಾನುವಾರ ರಾತ್ರಿ ತನ್ನ ತಮ್ಮ ಇಬ್ರಾಹಿಂ ಖಲೀಲ್ ಅವರ ಸ್ಕೂಟರಿನಲ್ಲಿ ತೆರಳುತ್ತಿದ್ದಾಗ ಅಡ್ಕ ಸ್ಟೋರ್ ಬಳಿ ಅಡ್ಡಗಟ್ಟಿದ ಆರೋಪಿಗಳ ತಂಡ ಬೈದು ಸ್ಕೂಟರ ಸಹಿತ ರಹಿಮಾನ್ ಅವರನ್ನು ದೂಡಿ ಹಾಕಿ ಗುಂಪು ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಘಟನೆಗೆ ಹಳೆ ವೈಷಮ್ಯ ಕಾರಣ ಎನ್ನಲಾಗಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 78/2024 ಕಲಂ 341, 143, 144, 146, 147, 148, 323, 324 ಆರ್/ಡಬ್ಲು 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment