ಬಂಟ್ವಾಳ, ಜುಲೈ 30, 2024 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿದ್ದು, ನದಿ ತೀರ ಪ್ರದೇಶಗಳಾದ ಪಾಣೆಮಂಗಳೂರು, ಬಂಟ್ವಾಳ ಸಹಿತ ವಿವಿಧ ಸ್ಥಳಗಳು ನೆರೆ ನೀರಿನಿಂದ ಆವೃತವಾಗಿದ್ದು, ಅಕ್ಷರಶಃ ದ್ವೀಪದಂತಾಗಿದೆ. ಹಲವು ಮನೆ, ಅಂಗಡಿಗಳಿಗೆ ನೆರೆ ನೀರು ನುಗ್ಗಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊAಡಿದ್ದಾರೆ. ಮಳೆ ಇನ್ನೂ ಮುಂದುವರಿದಿರುವ ಹಿನ್ನಲೆಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಇನ್ನಷ್ಟು ನೆರೆ ಭೀತಿ ಆವರಿಸಿದೆ. ಈ ಹಿನ್ನಲೆಯಲ್ಲಿ ತಾಲೂಕಾಡಳಿತ ಜನರಿಗೆ ಕಟ್ಟೆಚ್ಚರ ಘೋಷಿಸಿದೆ. ತಾಲೂಕು ತಹಶೀಲ್ದಾರ್ ಸಹಿತ ವಿವಿಧ ಇಲಾಖಾಧಿಕಾರಿಗಳು ಆಯಕಟ್ಟಿನ ಪ್ರದೇಶಗಳಲ್ಲಿ ಸಂಚರಿಸುವ ಮೂಲಕ ಜನರ ಸುರಕ್ಷತೆಗೆ ಆದ್ಯತೆ ನೀಡಿದ್ದಾರೆ.
ಇನ್ನು ಹಲವೆಡೆ ಮಳೆ ಹಾನಿ ಪ್ರಕರಣಗಳೂ ವರದಿಯಾಗಿದೆ. ವೀರಕಂಭ ಗ್ರಾಮದ ಪಾತ್ರತೋಟ ಎಂಬಲ್ಲಿ ಪಿ ಡಬ್ಲೂ÷್ಯ ಡಿ ರಸ್ತೆಗೆ ಗುಡ್ಡ ಜರಿದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದ್ದು ವಿದ್ಯುತ್ ಕಂಬಗಳು ಬಿದ್ದಿರುತ್ತದೆ. ಬಂಟ್ವಾಳ ಕಸಬಾ ಅಗ್ರಾರದಿಂದ ಜಕ್ರಿಬೆಟ್ಟು ರಸ್ತೆ ಗುಡ್ಡ ಕುಸಿತಗೊಂಡಿದೆ. ಮಾಣಿ-ಮೈಸೂರು ರಾಷ್ಟಿçÃಯ ಹೆದ್ದಾರಿಯ ಕೊಡಾಜೆ (ಪೆರಾಜೆ ಮಠ ತಿರುವಿನಲ್ಲಿ) ಕಿರಿದಾದ ಮೋರಿಯಿಂದಾಗಿ ಚರಂಡಿಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ತೊಡಕಾಗಿ ನೀರು ರಸ್ತೆಗೆ ಬಂದಿರುತ್ತದೆ. ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಬಂಟ್ವಾಳ ಕಸಬಾ ಗ್ರಾಮದ ನಾರಾಯಣ ಪೂಜಾರಿ ಬಿನ್ ತಿಮ್ಮಪ್ಪ ಪೂಜಾರಿ ಅವರ ವಾಸ್ತವ್ಯದ ಮನೆ ಬಳಿ ಬರೆ ಜರಿದಿದ್ದು ಮನೆಯವರನ್ನು ಸ್ಥಳಾಂತರ ಮಾಡಲಾಗುತ್ತಿದೆ. ವೀರಕಂಭ ಗ್ರಾಮದ ಮಂಗಲಪದವು ಪಾದೆ ಎಂಬಲ್ಲಿ ಗೀತಾರವರ ಮನೆ ಬದಿ ಗುಡ್ಡ ಜರಿದು ಭಾಗಶ: ಹಾನಿಯಾಗಿರುತ್ತದೆ ಮಾಣಿ ಗ್ರಾಮದ ನೆಲ್ಲಿ ಎಂಬಲ್ಲಿ ಶೇಖರ ಶೆಟ್ಟಿ ಬಿನ್ ಸಂಜೀವ ಶೆಟ್ಟಿ ಎಂಬುವರ ವಾಸ್ತವ್ಯದ ಮನೆ ಪೂರ್ಣ ಹಾನಿಗೊಂಡಿರುತ್ತದೆ. ಸದ್ರಿರವರು ಒಬ್ಬರೇ ವಾಸ್ತವ್ಯವಿದ್ದು, ಪ್ರಸ್ತುತ ಸಹೋದರನ ಮನೆಗೆ ವಾಸ್ತವ್ಯ ಬದಲಾವಣೆ ಮಾಡಿರುತ್ತಾರೆ.
ಬಂಟ್ವಾಳ ಕಸಬಾ ಗ್ರಾಮದ ಗೀತಾ ಕೋಂ ರಾಮಚಂದ್ರ ಅವರ ವಾಸ್ತವ್ಯದ ಮನೆಗೆ ಹಂಚು ಮೇಲ್ಛಾವಣಿಗೆ ಭಾಗಶಃ ಹಾನಿಯಾಗಿದೆ. ಶಂಭೂರು ಗ್ರಾಮದ ಕೊಪ್ಪಳ ಎಂಬಲ್ಲಿ ಸುಜಾತ ಕೊಂ ಕೇಶವ ಆಚಾರ್ಯ ಅವರ ವಾಸದ ಮನೆಗೆ ತೀವ್ರ ಹಾನಿ ಆಗಿರುತ್ತದೆ.
0 comments:
Post a Comment