ಬಂಟ್ವಾಳ ಪ್ರವಾಹ ಹಿನ್ನಲೆ : ಎರಡು ಕಾಳಜಿ ಕೇಂದ್ರಗಳಲ್ಲಿ 22 ಮಂದಿ ವಾಸ್ತವ್ಯ, ತಾಲೂಕಾಡಳಿತದಿಂದ ಸಕಲ ವ್ಯವಸ್ಥೆ - Karavali Times ಬಂಟ್ವಾಳ ಪ್ರವಾಹ ಹಿನ್ನಲೆ : ಎರಡು ಕಾಳಜಿ ಕೇಂದ್ರಗಳಲ್ಲಿ 22 ಮಂದಿ ವಾಸ್ತವ್ಯ, ತಾಲೂಕಾಡಳಿತದಿಂದ ಸಕಲ ವ್ಯವಸ್ಥೆ - Karavali Times

728x90

30 July 2024

ಬಂಟ್ವಾಳ ಪ್ರವಾಹ ಹಿನ್ನಲೆ : ಎರಡು ಕಾಳಜಿ ಕೇಂದ್ರಗಳಲ್ಲಿ 22 ಮಂದಿ ವಾಸ್ತವ್ಯ, ತಾಲೂಕಾಡಳಿತದಿಂದ ಸಕಲ ವ್ಯವಸ್ಥೆ

ಬಂಟ್ವಾಳ, ಜುಲೈ 31, 2024 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿದಿದ್ದು, ಪ್ರವಾಹ ಪರಿಸ್ಥಿತಿ ತಲೆದೋರಿದೆ. ಈ ಹಿನ್ನಲೆಯಲ್ಲಿ ತಾಲೂಕಿನ ಎರಡು ಶಾಲೆಗಳಲ್ಲಿ ತಾಲೂಕಾಡಳಿತ ಕಾಳಜಿ ಕೇಂದ್ರ ಸ್ಥಾಪಿಸಿದ್ದು, ಒಟ್ಟು 22 ಮಂದಿ ವಾಸ್ತವ್ಯ ಹೂಡಿದ್ದಾರೆ. 

ಬಂಟ್ವಾಳದ ಎಸ್ ವಿ ಎಸ್ ಕನ್ನಡ ಮಾಧ್ಯಮ ಶಾಲೆಯ ಕಾಳಜಿ ಕೇಂದ್ರದಲ್ಲಿ 11 ಜನ ಹೆಂಗಸರು, 6 ಜನ ಗಂಡಸರ ಸಹಿತ ಒಟ್ಟು 17 ಜನರಿದ್ದು, ನಾವೂರು ಗ್ರಾಮದ ಪೆರ್ಲ ಸೈಂಟ್ ಜೇಕಬ್ ಕನ್ನಡ ಮಾಧ್ಯಮ ಶಾಲೆಯಲ್ಲಿ 3 ಜನ ಹೆಂಗಸರು, 2 ಜನ ಗಂಡಸರಿರುವ ಒಂದು ಕುಟುಂಬಕ್ಕೆ ವ್ಯವಸ್ಥೆ ಮಾಡಲಾಗಿದೆ. 

ಇಲ್ಲಿ ಆಶ್ರಯ ಪಡೆದುಕೊಂಡವರಿಗೆ ತಾಲೂಕಾಡಳಿತ ವತಿಯಿಂದ ಊಟೋಪಚಾರ, ನೀರು, ಸಹಿತ ಮಲಗಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಾಲೂಕು ತಹಶೀಲ್ದಾರ್ ಅರ್ಚನಾ ಭಟ್ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಪ್ರವಾಹ ಹಿನ್ನಲೆ : ಎರಡು ಕಾಳಜಿ ಕೇಂದ್ರಗಳಲ್ಲಿ 22 ಮಂದಿ ವಾಸ್ತವ್ಯ, ತಾಲೂಕಾಡಳಿತದಿಂದ ಸಕಲ ವ್ಯವಸ್ಥೆ Rating: 5 Reviewed By: karavali Times
Scroll to Top