ಬೆಳ್ತಂಗಡಿ, ಜುಲೈ 09, 2024 (ಕರಾವಳಿ ಟೈಮ್ಸ್) : ಬೆಳ್ತಂಗಡಿ ನಿವಾಸಿಯೋರ್ವರಿಗೆ ಶೇರ್ ಮಾರ್ಕೆಟ್ ಬಗ್ಗೆ ಮಾಹಿತಿ ನೀಡಿ ಬಳಿಕ ವಿವಿಧ ಆಪ್ ಲಿಂಕ್ ಕಳಿಸಿ ಆ ಮೂಲಕ ಹಣ ಲಪಟಾಯಿಸಿದ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ನಿವಾಸಿಯ ಇನ್ಸ್‍ಟಾಗ್ರಾಂ ಖಾತೆಗೆ 2024 ರ ಮೇ 23 ರಂದು ಶೇರ್ ಮಾರ್ಕೆಟ್ ನಲ್ಲಿ ಹಣ ಹಾಕುವ ಬಗ್ಗೆ ಒಂದು ಲಿಂಕ್ ಬಂದಿರುತ್ತದೆ. ಅದರಲ್ಲಿ ಸೂಚಿಸಿದಂತೆ ಮುಂದುವರಿದಾಗ, ವ್ಯಕ್ತಿಯ ಮೊಬೈಲ್ ಸಂಖ್ಯೆಗೆ 551-ಜೆಒಎಚ್‍ಸಿಎಂ ಟ್ರೈನಿಂಗ್ ಕ್ಯಾಂಪ್ ಹಾಗೂ ಅಸೆಟ್ ಸ್ಟೂಡೆಂಟ್ ಗ್ರೂಪ್-ಆರ್57 ಎಂಬ ವಾಟ್ಸಪ್ ಗ್ರೂಪ್ ಗಳಿಗೆ ಸೇರಲ್ಪಡುತ್ತದೆ. ಸದ್ರಿ ವಾಟ್ಸಪ್ ಗ್ರೂಪ್ ನಲ್ಲಿ ಅಪರಿಚಿತ ವ್ಯಕ್ತಿಗಳು ಶೇರ್ ಮಾರುಕಟ್ಟೆ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ. ಬಳಿಕ ಅವರುಗಳು ಕಳುಹಿಸಿದ ಲಿಂಕ್ ಮುಖಾಂತರ, ಅವರು ತಿಳಿಸಿದ ಎಸಿ ಮಾಕ್ಸ್ ಹಾಗೂ ಜೆಒಎಚ್‍ಸಿಎಂ ಎಂಬ ಆಪ್ ನ್ನು ಡೌನ್ಲೋಡ್ ಮಾಡಿರುತ್ತಾರೆ. ಸದ್ರಿ ಎರಡು ಆಪ್ ಗಳಲ್ಲಿ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಅಪರಿಚಿತ ವ್ಯಕ್ತಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 3.30 ಲಕ್ಷ ರೂಪಾಯಿ ಹಣ ವರ್ಗಾಯಿಸಿರುತ್ತಾರೆ. ಸದ್ರಿ ವರ್ಗಾಯಿಸಿರುವ ಹಣವನ್ನು ಹಿಂತಿರುಗಿಸದೇ ಮೋಸ ಮಾಡಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಸಿ ಇ ಎನ್ ಅಪರಾಧ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 22/2024 ಕಲಂ: 66(ಸಿ) 66(ಡಿ) ಐಟಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment