ಮಂಗಳೂರು, ಜುಲೈ 17, 2024 (ಕರಾವಳಿ ಟೈಮ್ಸ್) : ಟೆಲಿಗ್ರಾಂ ಆಪ್ ನಲ್ಲಿ ಬಂಧ ಪಾರ್ಟ್ ಟೈಂ ಜಾಬ್ ಸಂದೇಶ ನಂಬಿ ವ್ಯಕ್ತಿಯೋರ್ವ ಲಕ್ಷಾಂತರ ರೂಪಾಯಿ ಕಳೆದುಕೊಂಡ ಬಗ್ಗೆ ಮಂಗಳೂರು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಭಿಷೇಕ್ ಕೆ ಎಂಬವರು ಈ ಬಗ್ಗೆ ಪೊಲೀಸ್ ದೂರು ನೀಡಿದ್ದು, ಇವರಿಗೆ ಜೂನ್ 13 ರಂದು ಜಿನ್ಸಿ ರಾಜ್ ಯೂಸರ್ ನೇಮ್ @ಜಿನ್ಸಿ133 ಎಂಬ ಟೆಲಿಗ್ರಾಂ ನಿಂದ ಪಾರ್ಟ್ ಟೈಂ ಜಾಬ್ ಬಗ್ಗೆ ಜಾಹೀರಾತು ನೀಡಿರುವುದನ್ನು ನೋಡಿ ಕೆಲಸಕ್ಕೆ ಸದ್ರಿ ಖಾತೆಗೆ ಮೆಸೇಜ್ ಮಾಡಿದ್ದಾರೆ. ಬಳಿಕ ಅಭಿಷೆಕ್ ಅವರನ್ನು ಯುಮ್ ಬ್ರಾಂಡಿಂಗ್ಸ್-3024 ಎಂಬ ಟೆಲಿಗ್ರಾಂ ಆಪ್ ಗೆ ಜಾಯಿನ್ ಮಾಡಿದ್ದು, ಅಪರಿಚಿತ ಆರೋಪಿಗಳು ಟಾಸ್ಕ್ ಮುಖಾಂತರ ಹಣ ಹೂಡಿಕೆ ಹಾಗೂ ವಿತ್ ಡ್ರಾ ಮಾಡುವ ಬಗ್ಗೆ ಮಾಹಿತಿ ನೀಡುತ್ತಾರೆ. ಅದರಂತೆ ಆನ್ ಲೈನ್ ಟಾಸ್ಕ್ ಮುಗಿಸಿದಾಗ ಇದಕ್ಕೆ ಪ್ರತಿಯಾಗಿ ಸಣ್ಣ ಮೊತ್ತವನ್ನು ಅಭಿಷೇಕ್ ಅವರಿಗೆ ಅಪರಿಚಿತ ಆರೋಪಿಗಳು ನೀಡಿರುತ್ತಾರೆ. ನಂತರ ದಿನಗಳಲ್ಲಿ ಟಾಸ್ಕ್ ಗಾಗಿ ಹಣ ಹಾಕಲು ತಿಳಿಸಿದಾಗ ಅಭಿಷೇಕ್ ಹಾಗೂ ಅವರ ತಮ್ಮ ಕಾರ್ತಿಕ್ ಅವರ ಬ್ಯಾಂಕ್ ಖಾತೆಯಿಂದ ಅಪರಿಚಿತ ವ್ಯಕ್ತಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 8,39,022/- ರೂಪಾಯಿ ಹಣ ವರ್ಗಾಯಿಸಿರುವುದಾಗಿದೆ. ಅಲ್ಲದೆ ಅಭಿಷೇಕ್ ಅವರ ಆಧಾರ್ ಕಾರ್ಡ್ ಹಾಗೂ ಡ್ರೈವಿಂಗ್ ಲೈಸೆನ್ಸ್ ಪ್ರತಿಯನ್ನು ಕಳುಹಿಸಿರುತ್ತಾರೆ. ಆದರೆ ಸದ್ರಿ ಆರೋಪಿಗಳು ಹಣವನ್ನು ಹಿಂತಿರುಗಿಸದೇ ವಂಚಿಸಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಸಿಇಎನ್ ಅಪರಾಧ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 25/2024 ಕಲಂ : 66(ಸಿ) 66(ಡಿ) ಐಟಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment