ಸುಳ್ಯ, ಜುಲೈ 11, 2024 (ಕರಾವಳಿ ಟೈಮ್ಸ್) : ಸುಳ್ಯ ನಿವಾಸಿಯೋರ್ವರಿಗೆ ಪಾರ್ಟ್ ಟೈಂ ಜಾಬ್ ಇದೆ ಎಂದು ಟೆಲಿಗ್ರಾಂ ಆಪ್ ಮೂಲಕ ಲಕ್ಷಾಂತರ ರೂಪಾಯಿ ವಂಚಿಸಿದ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಯದ ವ್ಯಕ್ತಿಯ ವಾಟ್ಸಪ್ ಸಂಖ್ಯೆಗೆ ಜೂನ್ 12 ರಂದು ಗೂಗಲ್ ಇಂಡಿಯಾ ಡಿಜಿಟಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಪಾರ್ಟ್ ಟೈಂ ಜಾಬ್ ನೀಡುವುದಾಗಿ ಹಾಗೂ ಅದಕ್ಕಾಗಿ ಗೂಗಲ್ ಮ್ಯಾಪ್ ನಲ್ಲಿ ಅವರು ಹೇಳುವ ರೆಸ್ಟೋರೆಂಟ್ ಕ್ಲಿಕ್ ಮಾಡಿ ಅದಕ್ಕೆ 5 ಸ್ಟಾರ್ ನೀಡಿ ರಿವ್ಯೂವ್ ಬರೆಯಬೇಕಾಗಿ ತಿಳಿಸಿದಂತೆ, ವ್ಯಕ್ತಿ ಒಪ್ಪಿರುತ್ತಾರೆ. ನಂತರ ಅವರುಗಳಿಂದ ಬಂದ ಸೂಚನೆಗಳ ಪ್ರಕಾರ, 3 ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗಿರುತ್ತಾರೆ. ನಂತರ ದಿನಗಳಲ್ಲಿ ಟಾಸ್ಕ್ ಗಾಗಿ ಹಣ ಹಾಕಲು ತಿಳಿಸಿದ್ದಕ್ಕೆ ದೂರುದಾರರು ಅವರ ಹಾಗೂ ಅವರ ಗೆಳೆಯನ ಬ್ಯಾಂಕ್ ಖಾತೆಯಿಂದ ಅಪರಿಚಿತ ವ್ಯಕ್ತಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 2.18 ಲಕ್ಷ ರೂಪಾಯಿ ಹಣ ವರ್ಗಾಯಿಸಿರುತ್ತಾರೆ. ಆದರೆ ಅಪರಿಚಿತ ಆರೋಪಿಗಳು ಸದ್ರಿ ಮೊತ್ತವನ್ನು ಹಿಂತಿರುಗಿಸದೇ ವಂಚನೆ ಮಾಡಿರುತ್ತಾರೆ ಎಂಬುದಾಗಿ ಬುಧವಾರ ನೀಡಿದ ದೂರಿನ ಮೇರೆಗೆ ಸಿಇಎನ್ ಅಪರಾಧ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಖ 23/2024 ಕಲಂ 66 (ಡಿ) ಐಟಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment