ಬಂಟ್ವಾಳ, ಜುಲೈ 09, 2024 (ಕರಾವಳಿ ಟೈಮ್ಸ್) : ವರ್ಕ್ ಪ್ರಮ್ ಹೋಮ್ ಕೆಲಸಕ್ಕಾಗಿ ಹುಡುಕಾಡಿಕೊಂಡಿದ್ದ ವ್ಯಕ್ತಿಗೆ ಟೆಲಿಗ್ರಾಂ ಅಪ್ ಮೂಲಕ ಮೆಸೇಜ್ ಕಳಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯೋರ್ವರು ವರ್ಕ್ ಫ್ರಂ ಹೋಂ ಕೆಲಸಕ್ಕಾಗಿ ಹುಡುಕಾಡಿಕೊಂಡಿರುವಾಗ ಅನಾಮಧೇಯ ಟೆಲಿಗ್ರಾಂ ಆಪ್ ನಲ್ಲಿ ವರ್ಕ್ ಪ್ರಮ್ ಹೋಮ್ ಕೆಲಸಕ್ಕೆ ಸಂಬಂಧಿಸಿದ ಮೇಸೆಜ್ ಸ್ವಿಕರಿಸಿರುತ್ತಾರೆ. ಮುಂದುವರಿದಂತೆ 2024 ರ ಎಪ್ರಿಲ್ 11 ರಂದು ಅಪರಿಚಿತ ವ್ಯಕ್ತಿಯೋರ್ವ ಟೆಲಿಗ್ರಾಂ ಮೂಲಕ ವ್ಯಕ್ತಿಯನ್ನು ಸಂಪರ್ಕಿಸಿರುತ್ತಾನೆ. ಆತನ ಸೂಚನೆಗಳನ್ನು ಪಾಲಿಸುತ್ತಾ ಬಂದ ವ್ಯಕ್ತಿ 11-04-2024 ರಿಂದ ಈವರೆಗೆ ಸದ್ರಿ ಅಪರಿಚಿತ ವ್ಯಕ್ತಿಗಳು ಹಂತ ಹಂತವಾಗಿ ಬೇರೆ ಬೇರೆ ಕಾರಣಗಳನ್ನು ನೀಡಿ, ಬ್ಯಾಂಕ್ ಖಾತೆಗಳಿಗೆ ಒಟ್ಟು 9.20 ಲಕ್ಷ ರೂಪಾಯಿ ಹಣವನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 119/2024 ಕಲಂ 66(ಸಿ), 66(ಡಿ), ಐಟಿ ಆಕ್ಟ್ ಹಾಗೂ ಕಲಂ 419, 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment