ಕಡಬ, ಜುಲೈ 01, 2024 (ಕರಾವಳಿ ಟೈಮ್ಸ್) : ಅಟೋ ರಿಕ್ಷಾದಲ್ಲಿ ಅಕ್ರಮ ದನದ ಮಾಂಸ ಸಾಗಾಟ ನಡೆಸುತ್ತಿದ್ದ ಪ್ರಕರಣ ಬೇಧಿಸಿದ ಕಡಬ ಪೊಲೀಸರು ಮಾಂಸ ಸಹಿತ ಇತರ ಸಲಕರಣೆಗಳನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಡಬ ಠಾಣಾ ಪಿಎಸ್ಸೈ ಅಭಿನಂಧನ್ ಎಸ್ ನೇತೃತ್ವದ ಪೊಲೀಸರು ರಾಮಕುಂಜ ಗ್ರಾಮದ ಅಮೈ ಎಂಬಲ್ಲಿ ಅನುಮಾನಾಸ್ಪದವಾಗಿ ಸಾಗುತ್ತಿದ್ದ ಕೆಎ21 ಸಿ4686 ನೋಂದಣಿ ಸಂಖ್ಯೆಯ ಅಟೋ ರಿಕ್ಷಾವನ್ನು ತಡೆದು ಪರಿಶೀಲಿಸಿದಾಗ ಈ ಅಕ್ರಮ ಮಾಂಸ ಮಾರಾಟ ಪ್ರಕರಣ ಬೆಳಕಿಗೆ ಬಂದಿದೆ.
ಅಟೋ ರಿಕ್ಷಾ ಪರಿಶೀಲನೆ ನಡೆಸಿದಾಗ ಅದರಲ್ಲಿ 62 ಕೆಜಿ ಮಾಂಸ, ಕಬ್ಬಿಣದ ಸಲಕರಣೆಗಳು, ಚಾಕು ಪತ್ತೆಯಾಗಿದೆ. ಇವುಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಚಾಲಕ ರಾಮಕುಂಜ ನಿವಾಸಿ ಅಬ್ದುಲ್ಲ ಹಾಗೂ ಇನ್ನೋರ್ವ ಆರೋಪಿ ಇಸ್ಮಾಯಿಲ್ ಕೊಯಿಲ ಎಂಬವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
0 comments:
Post a Comment