ಕಡಬ, ಜುಲೈ 25, 2024 (ಕರಾವಳಿ ಟೈಮ್ಸ್) : ಅಕ್ರಮ ದನ ಸಾಗಾಟ ಪ್ರಕರಣವನ್ನು ಕಡಬ ಪೊಲೀಸರು ಬೇಧಿಸಿದ ಘಟನೆ ರಾಮಕುಂಜ ಗ್ರಾಮದ ನೀರಾಜೆ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.
ಬುಧವಾರ ಸಂಜೆ ಉಪ್ಪಿನಂಗಡಿ ಕಡೆಯಿಂದ 2 ದನಗಳನ್ನು ಹಿಂಸಾತ್ಮಕವಾಗಿ ತುಂಬಿಸಿಕೊAಡು ರಾಮಕುಂಜ ಗ್ರಾಮದ ನೀರಾಜೆ ಕಡೆಗೆ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಡಬ ಪೊಲೀಸ್ ಠಾಣಾ ಪಿಎಸ್ಸೆöÊ ಅಭಿನಂಧನ ಎಂ ಎಸ್ ಅವರು ಸಿಬ್ಬಂದಿಗಳೊAದಿಗೆ ರಾಮಕುಂಜ ಗ್ರಾಮದ ನೀರಾಜೆ ಎಂಬಲ್ಲಿ ಕೆಎ18 ಎ3734 ನೊಂದಣಿ ಸಂಖ್ಯೆಯ ಪಿಕಪ್ ವಾಹನವನ್ನು ತಡೆದು ನಿಲ್ಲಿಸಿದಾಗ ಆರೋಪಿಗಳು ವಾಹನವನ್ನು ನಿಲ್ಲಿಸಿ ಪರಾರಿಯಾಗಿರುತ್ತಾರೆ. ಬಳಿಕ ಪಿಕಪ್ ವಾಹನ ಪರಿಶೀಲಿಸಿದಾಗ, ವಾಹನದಲ್ಲಿ 2 ದನಗಳನ್ನು ಹಿಂಸಾತ್ಮಕವಾಗಿ ಹಗ್ಗದಿಂದ ಕಟ್ಟಿರುವುದು ಕಂಡುಬAದಿರುತ್ತದೆ. ಈ ಬಗ್ಗೆ ಮುಂದಿನ ಕಾನೂನು ಕ್ರಮಕ್ಕಾಗಿ ವಾಹನವನ್ನು ಹಾಗೂ ಜಾನುವಾರನ್ನು ಸ್ವಾಧೀನಪಡಿಸಿಕೊಂಡು ಕಡಬ ಪೊಲೀಸು ಠಾಣೆಯಲ್ಲಿ ಅಪರಾಧ ಕ್ರಮಾಂಕ 75/2024 ಕಲಂ 4, 5, 12 ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆ-2020 ಮತ್ತು ಕಲಂ 66, 192(ಎ) ಐಎಂವಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
0 comments:
Post a Comment