ಬೆಂಗಳೂರು, ಜುಲೈ 30, 2024 (ಕರಾವಳಿ ಟೈಮ್ಸ್) : ಯುಜಿಸಿಇಟಿ-24ರ ಎಂಜಿನಿಯರಿAಗ್, ಆರ್ಕಿಟೆಕ್ಚರ್, ನ್ಯಾಚುರೋಪಥಿ-ಯೋಗ, ಪಶು ವೈದ್ಯಕೀಯ ಇತ್ಯಾದಿ ಕೋರ್ಸುಗಳ ಪ್ರವೇಶಕ್ಕೆ ಆಪ್ಷನ್ (ಇಚ್ಛೆ) ಗಳನ್ನು ದಾಖಲಿಸಲು ಮತ್ತಷ್ಟು ದಿನ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಈ ಮೊದಲು ಇಚ್ಛೆ/ ಆಯ್ಕೆಗಳನ್ನು ದಾಖಲಿಸಲು ಏಳು ದಿನ ಅವಕಾಶ ನೀಡಲಾಗಿದ್ದು, ಅದು ಇವತ್ತಿಗೆ ಅಂದರೆ ಜುಲೈ 30ಕ್ಕೆ ಕೊನೆ ಆಗಬೇಕಿತ್ತು. ಆದರೆ ಅಭ್ಯರ್ಥಿಗಳ ಮನವಿ ಮೇರೆಗೆ ಕಾಲಾವಕಾಶವನ್ನು ವಿಸ್ತರಿಸಿ ನೀಡಲಾಗಿದ್ದು, ಇಚ್ಛೆ (ಆಪ್ಷನ್) ಎಂಟ್ರಿ ಲಿಂಕ್ ಇನ್ನೂ ಕೂಡಾ ಸಕ್ರಿಯಗೊಳಿಸಲಾಗಿದೆ. ಅಭ್ಯರ್ಥಿಗಳು ಎಚ್ಚರಿಕೆಯಿಂದ ಇಚ್ಛೆಗಳನ್ನು ದಾಖಲು ಮಾಡಬೇಕು. ಯೋಗ ಮತ್ತು ನ್ಯಾಚುರೋಪತಿ ಕೋರ್ಸುಗಳ ಸೀಟ್ ಮ್ಯಾಟ್ರಿಕ್ಸ್ ಬಂದಿದ್ದು, ಅದಕ್ಕೂ ಆಯ್ಕೆಗಳನ್ಜು ದಾಖಲಿಸಲು ಸದ್ಯ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ.
ಪ್ರಕಟಿಸಲಾದ ಸೀಟ್ ಮ್ಯಾಟ್ರಿಕ್ಸ್ ಅನ್ನು ಪರಿಶೀಲಿಸಿ ಇಚ್ಚೆ / ಆಯ್ಕೆಗಳನ್ನು ದಾಖಲಿಸುವ ಸಮಯದಲ್ಲಿ ಆದ್ಯತಾ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ. ಆಪ್ಷನ್ ಗಳನ್ನು ದಾಖಲಿಸುವ ಬಗ್ಗೆ, ಸೀಟು ಹಂಚಿಕೆಯ ವಿವಿಧ ಹಂತಗಳ ಕುರಿತು ವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಯುಜಿಸಿಇಟಿ-24ರ ಸೀಟು ಹಂಚಿಕೆಯ ಮಾಹಿತಿ ಪುಸ್ತಕದಲ್ಲಿ ನೀಡಿರುವ ಸೂಚನೆಗಳನ್ನು ಓದಿಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.
ರಾಷ್ಟಿçÃಯ ವೈದ್ಯಕೀಯ ಮಂಡಳಿ, ಕಾಲಕಾಲಕ್ಕೆ ಹೊರಡಿಸುವ ಸೂಚನೆಗಳು / ಅಧಿಸೂಚನೆಗಳ ಅನ್ವಯ ವೈದ್ಯಕೀಯ ಮತ್ತು ದಂತ ವೈದ್ಯಕ್ಯೀಯ ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಕೆಇಎ ಪ್ರಕಟಣೆ ತಿಳಿಸಿದೆ.
0 comments:
Post a Comment