ಪುಣಚ : ರಿಪೇರಿಗಾಗಿ ಮನೆಯಲ್ಲಿ ದಾಸ್ತಾನಿಟ್ಟಿದ್ದ ಲಕ್ಷಾಂತರ ಮೌಲ್ಯದ ಬೋರ್ ವೆಲ್ ಪಂಪ್ ಕಳವು - Karavali Times ಪುಣಚ : ರಿಪೇರಿಗಾಗಿ ಮನೆಯಲ್ಲಿ ದಾಸ್ತಾನಿಟ್ಟಿದ್ದ ಲಕ್ಷಾಂತರ ಮೌಲ್ಯದ ಬೋರ್ ವೆಲ್ ಪಂಪ್ ಕಳವು - Karavali Times

728x90

24 July 2024

ಪುಣಚ : ರಿಪೇರಿಗಾಗಿ ಮನೆಯಲ್ಲಿ ದಾಸ್ತಾನಿಟ್ಟಿದ್ದ ಲಕ್ಷಾಂತರ ಮೌಲ್ಯದ ಬೋರ್ ವೆಲ್ ಪಂಪ್ ಕಳವು

 ಬಂಟ್ವಾಳ, ಜುಲೈ 24, 2024 (ಕರಾವಳಿ ಟೈಮ್ಸ್) :  ಮನೆಯಲ್ಲಿ ದಾಸ್ತಾನಿರಿಸಿದ್ದ ಲಕ್ಷಾಂತರ ಮೌಲ್ಯದ ಬೋರ್ ವೆಲ್ ಪಂಪ್ ಗಳನ್ನು ಕಳವುಗೈದ ಘಟನೆ ವಿಟ್ಲ ಸಮೀಪದ ಪುಣಚ ಎಂಬಲ್ಲಿ ಜು 22 ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.

ಇಲ್ಲಿನ ನಿವಾಸಿ ಗಣೇಶ ಗೌಡ (49) ಅವರ ಮನೆಯಲ್ಲಿ ಜುಲೈ 21 ರ ರಾತ್ರಿಯಿಂದ 22 ರ ಬೆಳಗ್ಗಿ ಮಧ್ಯದ ಅವಧಿಯಲ್ಲಿ ಈ ಕಳವು ಕೃತ್ಯ ನಡೆದಿದೆ.

ಇವರು ತನ್ನ  ಮನೆಯ ಬಳಿಯಿರುವ ಕಟ್ಟಡದಲ್ಲಿ,  ರಿಪೇರಿಗಾಗಿ ಸಾರ್ವಜನಿಕರಿಂದ ಪಡೆದು ಇರಿಸಿದ್ದ  ಒಟ್ಟು 16 ಬೋರ್‌ವೆಲ್‌ ಪಂಪ್ ಗಳು ಕಳ್ಳರ ಪಾಲಾಗಿವೆ. ಕಳವಾಗಿರುವ ಪಂಪ್ ಗಳ ಒಟ್ಟು ಮೌಲ್ಯ  1.81 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಪುಣಚ : ರಿಪೇರಿಗಾಗಿ ಮನೆಯಲ್ಲಿ ದಾಸ್ತಾನಿಟ್ಟಿದ್ದ ಲಕ್ಷಾಂತರ ಮೌಲ್ಯದ ಬೋರ್ ವೆಲ್ ಪಂಪ್ ಕಳವು Rating: 5 Reviewed By: lk
Scroll to Top