ಅಲೆತ್ತೂರು ಫ್ರೆಂಡ್ಸ್ ಸರ್ಕಲ್ ನೂತನ ಅಧ್ಯಕ್ಷರಾಗಿ ಭಾಸ್ಕರ್ ಕುಲಾಲ್, ಕಾರ್ಯದರ್ಶಿಯಾಗಿ ಲೋಹಿತ್ ಕರ್ಕೇರಾ ಆಯ್ಕೆ - Karavali Times ಅಲೆತ್ತೂರು ಫ್ರೆಂಡ್ಸ್ ಸರ್ಕಲ್ ನೂತನ ಅಧ್ಯಕ್ಷರಾಗಿ ಭಾಸ್ಕರ್ ಕುಲಾಲ್, ಕಾರ್ಯದರ್ಶಿಯಾಗಿ ಲೋಹಿತ್ ಕರ್ಕೇರಾ ಆಯ್ಕೆ - Karavali Times

728x90

1 July 2024

ಅಲೆತ್ತೂರು ಫ್ರೆಂಡ್ಸ್ ಸರ್ಕಲ್ ನೂತನ ಅಧ್ಯಕ್ಷರಾಗಿ ಭಾಸ್ಕರ್ ಕುಲಾಲ್, ಕಾರ್ಯದರ್ಶಿಯಾಗಿ ಲೋಹಿತ್ ಕರ್ಕೇರಾ ಆಯ್ಕೆ

ಬಂಟ್ವಾಳ, ಜುಲೈ 01, 2024 (ಕರಾವಳಿ ಟೈಮ್ಸ್) : ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್(ರಿ) ಅಲೆತ್ತೂರು ಇದರ ನೂತನ ಅಧ್ಯಕ್ಷರಾಗಿ ಭಾಸ್ಕರ ಕುಲಾಲ್ ಬಿ ಸಿ ರೋಡು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಅಲೆತ್ತೂರು ಮಂಗಳಾ ಭವನದಲ್ಲಿ ನಡೆದ ಸಂಸ್ಥೆಯ 44ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ. ನೇಮಿರಾಜ್ ಶೆಟ್ಟಿ ಕೊಡಂಗೆ ಸಭೆಯ ಅದ್ಯಕ್ಷತೆ ವಹಿಸಿದ್ದರು. 
ಉಪಾದ್ಯಕ್ಷರಾಗಿ ದಿನೇಶ್ ಸುವರ್ಣ, ಕಾರ್ಯದರ್ಶಿಯಾಗಿ ಲೋಹಿತ್ ಕರ್ಕೇರ, ಜೊತೆ ಕಾರ್ಯದರ್ಶಿಯಾಗಿ ಪವನ್ ಕುಲಾಲ್, ಸಂಘಟನನಾ ಕಾರ್ಯದರ್ಶಿಯಾಗಿ ನಿತಿನ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಜ್ವಲ್, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಸೃಜನ್ ಅವರು ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿಜಯ್ ಸುವರ್ಣ, ನಿತಿನ್ ಪೂಜಾರಿ, ಪ್ರಶಾಂತ್, ಅಶ್ವಥ್ ಶೆಟ್ಟಿ, ಶಿವರಾಜ್ ಕೊಡಂಗೆ, ಗೌರವ್ ಕೈಕುಂಜೆ ಅವರನ್ನು ನೇಮಕ ಮಾಡಲಾಯಿತು. 
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಬಿ ಮೋಹನ್ ಬಿ ಸಿ ರೋಡು, ಮೋನಪ್ಪ ಪೂಜಾರಿ ಅಲೆತ್ತೂರು, ಪರಮೇಶ್ವರ ಶೆಟ್ಟಿ ಅಲೆತ್ತೂರು, ಹಿಮಕರ ಪೂಜಾರಿ, ನಾರಾಯಣ ಪೂಜಾರಿ ಭಾಗವಹಿಸಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಅಲೆತ್ತೂರು ಫ್ರೆಂಡ್ಸ್ ಸರ್ಕಲ್ ನೂತನ ಅಧ್ಯಕ್ಷರಾಗಿ ಭಾಸ್ಕರ್ ಕುಲಾಲ್, ಕಾರ್ಯದರ್ಶಿಯಾಗಿ ಲೋಹಿತ್ ಕರ್ಕೇರಾ ಆಯ್ಕೆ Rating: 5 Reviewed By: karavali Times
Scroll to Top