ಬಂಟ್ವಾಳ, ಜುಲೈ 01, 2024 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಪ್ರಾಕೃತಿಕ ವಿಕೋಪ ನಿರ್ವಹಣಾ ಸಂಬಂಧ ತೆರೆಯಲಾಗಿರುವ 24*7 ಕಂಟ್ರೋಲ್ ರೂಂ ಗೆ ಹೆಚ್ಚುವರಿಯಾಗಿ ಇನ್ನೊಂದು ದೂರವಾಣಿ ಸಂಖ್ಯೆ ಸೇರ್ಪಡೆಗೊಳಿಸಲಾಗಿದೆ.
ಈಗಾಗಲೇ ಚಾಲ್ತಿಯಲ್ಲಿರುವ ಕಂಟ್ರೋಲ್ ರೂಂ ಸಂಖ್ಯೆ 08255-232500 ಸಂಖ್ಯೆಯನ್ನು ಬಳಸುವುದರ ಜೊತೆಗೆ ಸಾರ್ವಜನಿಕರಿಗೆ ವಾಟ್ಸಪ್ ಮೂಲಕವೂ ದೂರು ದಾಖಲಿಸಲು ಅನುಕೂಲವಾಗುವಂತೆ ಮೊಬೈಲ್ ಸಂಖ್ಯೆ 7337669102 ಯನ್ನು ಕಂಟ್ರೋಲ್ ವ್ಯವಸ್ಥೆಗೆ ಸೇರಿಸಲಾಗಿದ್ದು, ಇದರಲ್ಲಿ ಕರೆ ಸಹಿತ ವಾಟ್ಸಪ್ ವ್ಯವಸ್ಥೆ ಕೂಡಾ ಇರುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಬಂಟ್ವಾಳ ತಾಲೂಕು ತಹಶೀಲ್ದಾರರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment