ಬಿ.ಸಿ.ರೋಡು : ಬೈಕ್ ನಿಲ್ಲಿಸಿ ಊಟ ಮಾಡಿ ಬರುವಷ್ಟರಲ್ಲಿ ಬೈಕ್ ಕಳವು, ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲು - Karavali Times ಬಿ.ಸಿ.ರೋಡು : ಬೈಕ್ ನಿಲ್ಲಿಸಿ ಊಟ ಮಾಡಿ ಬರುವಷ್ಟರಲ್ಲಿ ಬೈಕ್ ಕಳವು, ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲು - Karavali Times

728x90

7 July 2024

ಬಿ.ಸಿ.ರೋಡು : ಬೈಕ್ ನಿಲ್ಲಿಸಿ ಊಟ ಮಾಡಿ ಬರುವಷ್ಟರಲ್ಲಿ ಬೈಕ್ ಕಳವು, ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲು

 ಬಂಟ್ವಾಳ, ಜುಲೈ 07, 2024 (ಕರಾವಳಿ ಟೈಮ್ಸ್) : ಬಿ ಸಿ ರೋಡಿನ ಚಿಕೋರಿ ಹೋಟೆಲ್ ಬಳಿ ನಿಲ್ಲಿಸಿದ್ದ ಬೈಕ್ ಕಳವಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಬಿ ಕಸಬಾ ಗ್ರಾಮದ ನಿವಾಸಿ ಪವನ ಕುಮಾರ (30) ಅವರು ಜೂನ್ 29 ರಂದು ಮಂಗಳೂರಿಗೆ ಬೈಕಿನಲ್ಲಿ ಕೆಲಸಕ್ಕೆ ಹೋಗಿ, ರಾತ್ರಿ ಹಿಂತಿರುಗಿ ಬಂದು ಬಿ ಸಿ ರೋಡಿನಲ್ಲಿರುವ ಚಿಕೋರಿ ಹೋಟೆಲ್ ಬಳಿ ತನ್ನ  ಕೆಎ70 ಇ-7129 ನೋಂದಣಿ ಸಂಖ್ಯೆಯ ಯಮಹಾ ಎಫ್ ಝಡ್ ಬೈಕನ್ನು ನಿಲ್ಲಿಸಿ, ಊಟ ಮುಗಿಸಿ ವಾಪಾಸ್ಸು ಬರುವಷ್ಟರಲ್ಲಿ ಬೈಕ್ ಕಳವಾಗಿದೆ. ಕಳವಾಗಿರುವ ಬೈಕ್ ಮೌಲ್ಯ 70 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಕಳವಾಗಿರುವ ಬೈಕ್ ಹುಡುಕಿದರೂ ಸಿಗದ ಹಿನ್ನಲೆಯಲ್ಲಿ ಈ ಬಗ್ಗೆ ಪವನ್ ಕುಮಾರ್ ಅವರು ಭಾನುವಾರ (ಜುಲೈ 7) ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು : ಬೈಕ್ ನಿಲ್ಲಿಸಿ ಊಟ ಮಾಡಿ ಬರುವಷ್ಟರಲ್ಲಿ ಬೈಕ್ ಕಳವು, ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲು Rating: 5 Reviewed By: karavali Times
Scroll to Top