ಸುಳ್ಯ, ಜೂನ್ 30, 2024 (ಕರಾವಳಿ ಟೈಮ್ಸ್) : ತವರಿನಲ್ಲಿದ್ದ ಪತ್ನಿಗೆ ಪತಿಯೇ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಜಾಲ್ಸೂರು ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಪತಿಯ ಚೂರಿ ಇರಿತದಿಂದ ಗಾಯಗೊಂಡ ಪತ್ನಿಯನ್ನು ಇಲ್ಲಿನ ನಿವಾಸಿ ಅಶ್ವಿನಿ ಕೆ ವಿ (25) ಎಂದು ಹೆಸರಿಸಲಾಗಿದ್ದು, ಆರೋಪಿ ಪತಿಯನ್ನು ನವೀನ್ ಕುಮಾರ್ ಎಂದು ಗುರುತಿಸಲಾಗಿದೆ. ಅಶ್ವಿನಿ ಅವರು 6 ವರ್ಷಗಳ ಹಿಂದೆ ನವೀನ್ ಕುಮಾರ್ ಎಂಬಾತನನ್ನು ವಿವಾಹವಾಗಿದ್ದು, ಆ ಬಳಿಕ ಆತ ವಿನಃ ಕಾರಣ ಕಿರುಕುಳ ನೀಡುತ್ತಾ ಜಗಳವಾಡುತ್ತಾ ಬಂದಿರುವ ಕಾರಣಕ್ಕೆ ಪತ್ನಿ ಅಶ್ವಿನಿ ಕಳೆದ 4 ವರ್ಷಗಳಿಂದ ತನ್ನ ತವರು ಮನೆಯಾದ ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ವಿನೋಭನಗರ ಎಂಬಲ್ಲಿ ವಾಸವಾಗಿರುತ್ತಾರೆ. ಅಲ್ಲಿಗೂ ಬರುತ್ತಿದ್ದ ಪತಿ ನವೀನ್ ಕುಮಾರ್ ವಿನಾಃ ಕಾರಣ ಪತ್ನಿಗೆ ಬಯ್ಯುತ್ತಿದ್ದ ಎನ್ನಲಾಗಿದೆ.
ಶುಕ್ರವಾರ ರಾತ್ರಿ (ಜೂನ್ 28) ಪತ್ನಿ ಅಶ್ವಿನಿ ಅವರು ಪಕ್ಕದ ಮನೆಗೆ ಹೋದಾಗ ಅಲ್ಲಿಗೆ ಬಂದ ಆರೋಪಿ ಪತಿ ಆತನಲ್ಲಿದ್ದ ಚೂರಿಯಿಂದ ಪತ್ನಿಗೆ ಹಲ್ಲೆ ನಡೆಸಿದ್ದಾನೆ. ಇರಿತದಿಂದ ಗಾಯಗೊಂಡ ಪತ್ನಿ ಬೊಬ್ಬೆ ಹೊಡೆದಿದ್ದು, ಈ ಸಂದರ್ಭ ಆರೋಪಿ ಪತಿ ಚೂರಿಯನ್ನು ಸ್ಥಳದಲ್ಲಿ ಬಿಸಾಡಿ ಹೋಗಿರುತ್ತಾನೆ. ಗಾಯಾಳು ಪತ್ನಿ ಅಶ್ವಿನಿ ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಸುಳ್ಯ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 89/2024 ಕಲಂ 324, 307 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment