ಬೋಳಂತೂರು : ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ಸೌದಿ ಕರೆನ್ಸಿ ಕದ್ದೊಯ್ದ ಕಳ್ಳರು - Karavali Times ಬೋಳಂತೂರು : ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ಸೌದಿ ಕರೆನ್ಸಿ ಕದ್ದೊಯ್ದ ಕಳ್ಳರು - Karavali Times

728x90

27 June 2024

ಬೋಳಂತೂರು : ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ಸೌದಿ ಕರೆನ್ಸಿ ಕದ್ದೊಯ್ದ ಕಳ್ಳರು

ಬಂಟ್ವಾಳ, ಜೂನ್ 27, 2024 (ಕರಾವಳಿ ಟೈಮ್ಸ್) : ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಕರೆನ್ಸಿ ಕಳವುಗೈದ ಘಟನೆ ಬೋಳಂತೂರು ಗ್ರಾಮದ ಬಂಗಾರಕೋಡಿ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇಲ್ಲಿನ ನಿವಾಸಿ ಶ್ರೀಮತಿ ಜೀನತ್ (46) ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಜೂನ್ 21 ರಿಂದ 26 ರ ಮಧ್ಯದ ಅವಧಿಯಲ್ಲಿ ಮನೆಯ ಟೇರೀಸ್ ಬಾಗಿಲನ್ನು ಮುರಿದು ಒಳಪ್ರವೇಶಿಸಿದ ಕಳ್ಳರು ರೂಮನಲ್ಲಿದ್ದ ಗಾಡ್ರೇಜ್ ಕಪಾಟಿನ ಬಾಗಿಲನ್ನು ಆಯುಧದಿಂದ ಮೀಟಿ ಅದರೊಳಗಿದ್ದ 52 ಗ್ರಾಂ ಚಿನ್ನದ ಆಭರಣಗಳನ್ನು ಹಾಗೂ ವಿದೇಶದಿಂದ ಜೀನತ್ ಅವರ ಮಗ ತಂದಿದ್ದ 1.15 ಲಕ್ಷ ಭಾರತೀಯ ಮೌಲ್ಯದ 5000/- ಸೌದಿ ರಿಯಲ್ಸ್ ಕರೆನ್ಸಿಯನ್ನು ಕಳವುಗೈದಿದ್ದಾರೆ. ಕಳವಾಗಿರುವ ಸೊತ್ತುಗಳ ಒಟ್ಟು ಮೌಲ್ಯ 3.30 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬೋಳಂತೂರು : ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ಸೌದಿ ಕರೆನ್ಸಿ ಕದ್ದೊಯ್ದ ಕಳ್ಳರು Rating: 5 Reviewed By: karavali Times
Scroll to Top