ಸುಳ್ಯ, ಜೂನ್ 11, 2024 (ಕರಾವಳಿ ಟೈಮ್ಸ್) : ತಾಲೂಕಿನ ಬೆಳ್ಳಾರೆ ಎಂಬಲ್ಲಿರುವ ಎಪಿಎಂಸಿ ಮಾರುಕಟ್ಟೆ ಕಟ್ಟಡದಲ್ಲಿ ಹೆಂಗಸಿನ ಶವ ಪತ್ತೆಯಾಗಿದ್ದು, ಯಾರೋ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.
ಈ ಬಗ್ಗೆ ಬೆಳ್ಳಾರೆ ಪೊಲೀಸರಿಗೆ ದೂರು ನೀಡಿರುವ ಸ್ಥಳೀಯ ನಿವಾಸಿ ಶ್ರೀಮತಿ ನಮಿತಾ ಎಲ್ ರೈ ಅವರು ಬೆಳ್ಳಾರೆ ಗ್ರಾಮದ ಬೆಳ್ಳಾರೆ ಎಂಬಲ್ಲಿರುವ ಎಪಿಎಂಸಿ ಮಾರುಕಟ್ಟೆ ಕಟ್ಟಡದಲ್ಲಿ ರಾತ್ರಿ ಮಲಗುತ್ತಿದ್ದ ನಳಿನಿ ಎಂಬ ಹೆಂಗಸನ್ನು ಯಾರೋ ದುಷ್ಕರ್ಮಿ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ರೀತಿಯಲ್ಲಿ ಕಂಡು ಬರುತ್ತಿದೆ. ಜೂನ್ 10 ಬೆಳಿಗ್ಗೆ ಪರಿಚಯದ ಮಾಧವ ತಡಗಜೆ ಎಂಬವರು ಕರೆ ಮಾಡಿ ತಿಳಿಸಿದ ಮೇರೆಗೆ, ನಮಿತಾ ಅವರು ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ, ಮಾರುಕಟ್ಟೆಯ ಬಳಿ ನಳಿನಿ ಅವರ ಮೃತದೇಹ ಕಂಡು ಬಂದಿದೆ. ನಳಿನಿ ಅವರನ್ನು ಯಾರೋ ದುಷ್ಕರ್ಮಿಗಳು ಜೂನ್ 9 ರಂದು ರಾತ್ರಿಯಿಂದ, ಮರುದಿನ ಬೆಳಿಗ್ಗಿನ ಅವಧಿಯಲ್ಲಿ ಕೊಲೆ ಮಾಡಿದಂತೆ ಕಂಡುಬರುತ್ತಿರುವುದಾಗಿ ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment