ಬಂಟ್ವಾಳ, ಜೂನ್ 06, 2024 (ಕರಾವಳಿ ಟೈಮ್ಸ್) : ಮನೆಯ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತಗಡು ಶೀಟು ಹಾಗೂ ಕೆಂಪು ಕಲ್ಲು ಸಮೇತ ಮೇಲಿನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಕಟ್ಟಡ ಕಾರ್ಮಿಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಅಮ್ಟಾಡಿ ಗ್ರಾಮದ ಬಡಾಜೆ ಎಂಬಲ್ಲಿ ಬುಧವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.
ಮೃತ ಕಟ್ಟಡ ಕಾರ್ಮಿಕನನ್ನು ಅಮ್ಟಾಡಿ ನಿವಾಸಿ ಪ್ರಕಾಶ್ (44) ಎಂದು ಹೆಸರಿಸಲಾಗಿದೆ. ಪ್ರಕಾಶ್ ಅವರು ಬುಧವಾರ ಮಧ್ಯಾಹ್ನ ಅಮ್ಟಾಡಿ ಗ್ರಾಮದ ಬಡಾಜೆಗುತ್ತು ಮೋಹನ್ ಶೆಟ್ಟಿ ಎಂಬವರ ಮನೆಯ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತಗಡು ಶೀಟು ಹಾಗೂ ಕೆಂಪು ಕಲ್ಲುಗಳ ಸಮೇತ ಮೇಲಿನಿಂದ ಕೆಳಗೆ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮನೆ ಮಾಲಿಕ ಮೋಹನ್ ಶೆಟ್ಟಿ ಹಾಗೂ ಕಂಟ್ರಾಕ್ಟರ್ ಲೋಕೇಶ್ ಸುವರ್ಣ ಅವರು ಯಾವುದೇ ಸುರಕ್ಷತಾ ಕ್ರಮ ಅಳವಡಿಸದೆ ತೀರಾ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯತನದಿಂದ ಮನೆಯ 2ನೇ ಮಹಡಿ ನಿರ್ಮಾಣದ ಕೆಲಸ ಮಾಡಿಸುತ್ತಿದ್ದುದರಿಂದ ಈ ಅವಘಡ ಸಂಭವಿಸಿದೆ ಎಂದು ಪ್ರಕಾಶ್ ಅವರ ಸಹೋದರ ಆನಂದ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
0 comments:
Post a Comment