ಬಂಟ್ವಾಳ, ಜೂನ್ 22, 2024 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯಲ್ಲಿ ವ್ಯಾಪಾರಸ್ಥರು ಉದ್ಯಮ ಪರವಾನಿಗೆ ಪಡೆಯದೆ ಇರುವುದು ಹಾಗೂ 2024-25ನೇ ಸಾಲಿಗೆ ಉದ್ಯಮ ಪರವಾನಿಗೆ ನವೀಕರಿಸದೆ ಇರುವುದು ಕಂಡು ಬಂದಿದೆ. ತಕ್ಷಣ ವ್ಯಾಪಾರಸ್ಥರು ಉದ್ಯಮ ಪರವಾನಿಗೆ ಪಡೆದುಕೊಳ್ಳಲು ಹಾಗೂ ನವೀಕರಿಸಿಕೊಳ್ಳಲು ಸೂಚಿಸಲಾಗಿದೆ. ತಪ್ಪಿದಲ್ಲಿ ಕರ್ನಾಟಕ ಪುರಸಭಾ ಕಾಯ್ದೆ-1964 ರ ಕಲಂ 256ರಂತೆ ದಂಡ ವಿಧಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
22 June 2024
- Blogger Comments
- Facebook Comments
Subscribe to:
Post Comments (Atom)
0 comments:
Post a Comment