ಬಂಟ್ವಾಳ ತಾಲೂಕಿನಾದ್ಯಂತ ನಿರಂತರ ಮಳೆಗೆ ಹಲವೆಡೆ ಹಾನಿ, ಅಪಾರ ನಷ್ಟ - Karavali Times ಬಂಟ್ವಾಳ ತಾಲೂಕಿನಾದ್ಯಂತ ನಿರಂತರ ಮಳೆಗೆ ಹಲವೆಡೆ ಹಾನಿ, ಅಪಾರ ನಷ್ಟ - Karavali Times

728x90

26 June 2024

ಬಂಟ್ವಾಳ ತಾಲೂಕಿನಾದ್ಯಂತ ನಿರಂತರ ಮಳೆಗೆ ಹಲವೆಡೆ ಹಾನಿ, ಅಪಾರ ನಷ್ಟ

ಬಂಟ್ವಾಳ, ಜೂನ್ 26, 2024 (ಕರಾವಳಿ ಟೈಮ್ಸ್) :  ತಾಲೂಕಿನಾದ್ಯಂತ ಮಂಗಳವಾರ ಸಂಜೆಯಿಂದ ನಿರಂತರ ಮಳೆಯಾಗುತ್ತಿದ್ದು, ಹಲವೆಡೆ ಮಳೆ ಹಾನಿ ಸಂಭವಿಸಿದೆ. ಕೆದಿಲ ಗ್ರಾಮದ ಗಾಂಧಿನಗರ ನಿವಾಸಿ ಪೂವಕ್ಕ ಕೋಂ ನಾರಾಯಣ ಅವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ನೆಟ್ಲ ಗ್ರಾಮದ ನಿಟಿಲೇಶ್ವರ ದೇವಸ್ಥಾನದ ಸಮೀಪ ಮರ ಬಿದ್ದು ಅವರಣ ಗೋಡೆಗೆ ಹಾನಿ ಸಂಭವಿಸಿದೆ. 

ಗೋಳ್ತಮಜಲು ಗ್ರಾಮದ ನೆಟ್ಲ ಧನಂಜಯ ಗಟ್ಟಿ ಬಿನ್ ಬಾಬು ಗಟ್ಟಿ ಅವರ ವಾಸ್ತವ್ಯದ ಮನೆ ಮೇಲೆ ಅಶ್ವಥ ಮರ ಬಿದ್ದು ಭಾಗಶಃ ಮನೆ ಹಾಗೂ ಆವರಣ ಗೋಡೆಗೆ ಭಾಗಶಃ ಹಾನಿ ಸಂಭವಿಸಿದೆ. ನರಿಕೊಂಬು ಗ್ರಾಮದ ಮರ್ಲಿಮಾರು ಎಂಬಲ್ಲಿ ಭತ್ತದ ಗದ್ದೆಯಲ್ಲಿ ಮಳೆ ನೀರು ನಿಂತು ನಷ್ಟ ಸಂಭವಿಸಿದೆ. ನರಿಕೊಂಬು ಗ್ರಾಮದ ಮಾಣಿಮಜಲು ನಿವಾಸಿ ರಾಮಚಂದ್ರ ಗೌಡ ಅವರ ಮನೆ ಬದಿ ಮಣ್ಣು ಜರಿದು ಶೌಚಾಲಯದ ಪಿಟ್ ಗುಂಡಿ ಜರಿದು ಬಿದ್ದಿದೆ. 

ಪುದು ಗ್ರಾಮದ ಕೆಸನಮೊಗರು ನಿವಾಸಿ ಬಾಬು ಸಪಲ್ಯ ಬಿನ್ ಸುಬ್ಬಪ್ಪ ಅವರ ಮನೆ ಮೇಲೆ ಮರ ಬಿದ್ದು ಗೋಡೆ ಹಾಗೂ ಹಂಚು ಹಾನಿಯಾಗಿದೆ. ಅಮ್ಟಾಡಿ ಗ್ರಾಮದ ಕಿನ್ನಿಬಿಟ್ಟು ನಿವಾಸಿ ಬ್ರಿಜಿತ್ ಡಿಕೋಸ್ಟ ಕೋಂ ರೈಮಂಡ್ ಡಿಕೋಸ್ಟ ಅವರ ವಾಸ್ತವ್ಯದ ಮನೆಗೆ ತಾಗಿರುವ ಹಟ್ಟಿಗೆ ಹಾನಿಯಾಗಿರುತ್ತದೆ. ಪುಣಚ ಗ್ರಾಮದ ಮಲ್ಲಿಕಟ್ಟೆ ನಿವಾಸಿ ಭಾಸ್ಕರ ಬಿನ್ ಕಾಂತು ನಲಿಕೆ ಅವರ ಮನೆಯ ಆವರಣ ಗೋಡೆ ಕುಸಿದು ನಷ್ಟ ಸಂಭವಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ತಾಲೂಕಿನಾದ್ಯಂತ ನಿರಂತರ ಮಳೆಗೆ ಹಲವೆಡೆ ಹಾನಿ, ಅಪಾರ ನಷ್ಟ Rating: 5 Reviewed By: karavali Times
Scroll to Top