ಅಂಚೆ ಇಲಾಖೆಯ ಮಳೆಗಾಲದ ಸಂಭಾವ್ಯ ಅವಘಡಕ್ಕೆ ಸುರಕ್ಷಾ ಅಪಘಾತ ವಿಮೆ ವಿಶೇಷ ಅಭಿಯಾನ ಜೂನ್ 22ರವರೆಗೆ ಚಾಲ್ತಿ - Karavali Times ಅಂಚೆ ಇಲಾಖೆಯ ಮಳೆಗಾಲದ ಸಂಭಾವ್ಯ ಅವಘಡಕ್ಕೆ ಸುರಕ್ಷಾ ಅಪಘಾತ ವಿಮೆ ವಿಶೇಷ ಅಭಿಯಾನ ಜೂನ್ 22ರವರೆಗೆ ಚಾಲ್ತಿ - Karavali Times

728x90

20 June 2024

ಅಂಚೆ ಇಲಾಖೆಯ ಮಳೆಗಾಲದ ಸಂಭಾವ್ಯ ಅವಘಡಕ್ಕೆ ಸುರಕ್ಷಾ ಅಪಘಾತ ವಿಮೆ ವಿಶೇಷ ಅಭಿಯಾನ ಜೂನ್ 22ರವರೆಗೆ ಚಾಲ್ತಿ

ಪುತ್ತೂರು, ಜೂನ್ 20, 2024 (ಕರಾವಳಿ ಟೈಮ್ಸ್) : ಅಂಚೆ ಇಲಾಖೆ/ ಐಪಿಪಿಬಿ ವಿವಿಧ ವಿಮೆ ಕಂಪೆನಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು, ಮಳೆಗಾಲದ ಅವಧಿಯಲ್ಲಿ ಸಂಭವಿಸಬಹುದಾದ ಅವಘಡಕ್ಕೆ ಅಪಘಾತ ವಿಮೆ ಮಾಡುವ  ವಿಶೇಷ ಅಭಿಯಾನವನ್ನು ಜೂನ್ 22 ರವರೆಗೆ ಆಯೋಜಿಸಲಾಗಿದೆ. 

ಸರ್ವರಿಗೂ ಸುರಕ್ಷೆ ಕೊಡುವ ಉದ್ದೇಶದ ಅಂಚೆ  ಇಲಾಖೆಯ  ಈ  ವಿಶೇಷ ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ದೊರೆಯುತ್ತಿದೆ. ಪ್ರತಿ ದಿನ ಪುತ್ತೂರು ವಿಭಾಗದಲ್ಲಿ ಸುಮಾರು 500 ಜನರು ಈ ಅಪಘಾತ ವಿಮೆಗೆ  ನೋಂದಾಯಿಸುತ್ತಿದ್ದಾರೆ ಹಾಗೂ ರಾಜ್ಯದಲ್ಲಿ ಸರಾಸರಿ ದಿನಕ್ಕೆ 12 ಸಾವಿರ ಮಂದಿ ಗ್ರಾಹಕರು ನೋಂದಾಯಿಸುತ್ತಿದ್ದಾರೆ.   ದಿನದಿಂದ ದಿನಕ್ಕೆ ವಿಮೆ ಮಾಡಿಸುವ ಜನರ ಸಂಖ್ಯೆ ಜಾಸ್ತಿ ಆಗುತ್ತಿದೆ. 

ಈ ಅಪಘಾತ ವಿಮೆಗೆ ನೋಂದಾಯಿಸಿದ ಗ್ರಾಹಕರು ಅಪಘಾತಕ್ಕೆ ಒಳಗಾಗಿ ಇದುವರೆಗೆ 66 ಜನರ  ವಿಮೆ ಮೊತ್ತವನ್ನು ಅವರ ವಾರಿಸುದಾರರಿಗೆ ಈಗಾಗಲೇ ವಿತರಿಸಲಾಗಿದೆ ಹಾಗೂ 256 ಮಂದಿಯ  ವೈದ್ಯಕೀಯ  ವೆಚ್ಚವನ್ನು ಮರುಪಾವತಿಸಲಾಗಿದೆ.

18 ರಿಂದ 65 ವರ್ಷದೊಳಗಿನ ಯಾವುದೇ ಗ್ರಾಹಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು. ಸಮಗ್ರ ರಕ್ಷಣಾ ಅಪಘಾತ ವಿಮೆಯ ಪ್ರೀಮಿಯಂ ವಾರ್ಷಿಕ  549/- ಹಾಗೂ 749/- ಆಗಿರುತ್ತದೆ. ರಸ್ತೆ ಅಪಘಾತ, ಜಾರಿ ಬೀಳುವುದು, ಹಾವು ಕಡಿತ, ಅಗ್ನಿ, ವಿದ್ಯುತ್ ಆಘಾತ, ಸಿಡಿಲಾಘಾತ,  ಚಾಲಕರು, ನೀರಿನಲ್ಲಿ ಮುಳುಗುವುದು, ಮೆಷಿನ್ ನಲ್ಲಿ ಕೆಲಸ ಮಾಡುವಾಗ ಮೊದಲಾದ ಅಪಘಾತಗಳಲ್ಲಿ ಸಾವು ಅಥವಾ ಶಾಶ್ವತ ಅಂಗ ವೈಪಲ್ಯದ ಸಂದರ್ಭದಲ್ಲಿ ವಿಮೆಯ ಮೊತ್ತ 10 ಲಕ್ಷ / 15 ಲಕ್ಷ ರೂಪಾಯಿ ಕೊಡಲಾಗುವುದು.  ಒಳರೋಗಿ ವೆಚ್ಚ 60 ಸಾವಿರ ರೂಪಾಯಿ, ಹೊರರೋಗಿ ವೆಚ್ಚ 30 ಸಾವಿರ ರೂಪಾಯಿ ಈ ವಿಮೆಯಲ್ಲಿ   ಒಳಗೊಂಡಿದೆ. 

ಈ ಸೌಲಭ್ಯವನ್ನು ಪಡೆಯಲು ನೀವು ನಿಮ್ಮ ಸಮೀಪದ ಅಂಚೆ ಕಚೇರಿ ಅಥವಾ ನಿಮ್ಮ ಪೆÇೀಸ್ಟ್ ಮ್ಯಾನ್  ಗಳನ್ನು ಸಂಪರ್ಕಿಸಬಹುದು. ಅಂಗಡಿ/ ಹೊಟೇಲ್/ ಕೈಗಾರಿಕೆ/ ವಿವಿಧ ಮಾಲೀಕರು ತಮ್ಮ ಸಿಬ್ಬಂದಿಗಳಿಗೆ ನೆರವಿನ  ಅಂಗವಾಗಿ ಅಪಘಾತ ವಿಮೆಯನ್ನು ತಮ್ಮ ಬಂಡವಾಳದಿಂದ ಕೊಡುವವರಿದ್ದರೆ ಅವಶ್ಯಕತೆಗೆ ಅನುಸಾರವಾಗಿ  ಅಂಚೆ  ಇಲಾಖೆಯು ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಿ ಕೂಡಲೇ ವಿಮೆ ವಿತರಿಸುವ ವ್ಯವಸ್ಥೆಯನ್ನು  ಮಾಡಲಾಗುವುದು. 

ಈ ಯೋಜನೆಯ ಪ್ರಯೋಜನ ಪಡೆಯಲು ತಮ್ಮ ಹತ್ತಿರದ ಅಂಚೆ ಕಚೇರಿಯನ್ನು ಅಥವಾ ಅಂಚೆ ಇಲಾಖೆಯ ಮಾರ್ಕೆಟಿಂಗ್ ವಿಭಾಗದ ಅಂಚೆ ಸಿಬ್ಬಂದಿ ಗುರುಪ್ರಸಾದ್ ಅವರ ಮೊಬೈಲ್ ಸಂಖ್ಯೆ 8310825088 ಅಥವಾ  ವಿಭಾಗೀಯ ಕಚೇರಿಯನ್ನು ಇಮೇಲ್ doputtur.ka@indiapost.gov.in ಹಾಗೂ ಮೊಬೈಲ್ ಸಂಖ್ಯೆ 9448291073/ 9448291052 ನ್ನು ಸಂಪರ್ಕಿಸುವ ಮೂಲಕ ಸರ್ವ ನಾಗರಿಕರೂ ಕೂಡಾ ಮಳೆಗಾಲದ ಅವಧಿಯಲ್ಲಿ ಅಪಘಾತ ವಿಮೆ ವಿತರಿಸುವ ಅಂಚೆ ಇಲಾಖೆಯ ಪ್ರಸ್ತುತ ಯೋಜನೆಯ ಸೇವೆಯನ್ನು ಪಡೆದುಕೊಳ್ಳಬಹದು ಎಂದು ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಂಚೆ ಇಲಾಖೆಯ ಮಳೆಗಾಲದ ಸಂಭಾವ್ಯ ಅವಘಡಕ್ಕೆ ಸುರಕ್ಷಾ ಅಪಘಾತ ವಿಮೆ ವಿಶೇಷ ಅಭಿಯಾನ ಜೂನ್ 22ರವರೆಗೆ ಚಾಲ್ತಿ Rating: 5 Reviewed By: karavali Times
Scroll to Top