ಪೊಳಲಿ : ಚಾಲಕನ ನಿಯಂತ್ರಣ ಮೀರಿ ಖಾಸಗಿ ಬಸ್ ಪಲ್ಟಿ, ಪ್ರಯಾಣಿಕರು ಪಾರು - Karavali Times ಪೊಳಲಿ : ಚಾಲಕನ ನಿಯಂತ್ರಣ ಮೀರಿ ಖಾಸಗಿ ಬಸ್ ಪಲ್ಟಿ, ಪ್ರಯಾಣಿಕರು ಪಾರು - Karavali Times

728x90

16 June 2024

ಪೊಳಲಿ : ಚಾಲಕನ ನಿಯಂತ್ರಣ ಮೀರಿ ಖಾಸಗಿ ಬಸ್ ಪಲ್ಟಿ, ಪ್ರಯಾಣಿಕರು ಪಾರು

ಬಂಟ್ವಾಳ, ಜೂನ್ 16, 2024 (ಕರಾವಳಿ ಟೈಮ್ಸ್) : ಚಾಲಕನ ನಿಯಂತ್ರಣ ಮೀರಿದ ಖಾಸಗಿ ಬಸ್ಸೊಂದು ಪಲ್ಟಿಯಾದ ಘಟನೆ ಪೊಳಲಿ-ಕಮ್ಮಾಜೆ ಸಮೀಪದ ಕಾಗುಡ್ಡೆ ಎಂಬಲ್ಲಿ ಭಾನುವಾರ ಸಂಭವಿಸಿದೆ. 

ಬಿ ಸಿ ರೋಡಿನಿಂದ ಕಲ್ಪನೆ ಮಾರ್ಗವಾಗಿ ಕೊಳತ್ತಮಜಲು ಮೂಲಕ ಮಂಗಳೂರು ಸಂಚಾರ ಮಾಡುವ ಖಾಸಗಿ ಬಸ್ ಇದಾಗಿದ್ದು, ಭಾನುವಾರ ಬೆಳಿಗ್ಗೆ ಕಾಗುಡ್ಡೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ಮೀರಿ ಉರುಳಿ ಬಿದ್ದಿದೆ. ಭಾನುವಾರವಾಗಿದ್ದರಿಂದ ಬಸ್ಸಿನಲ್ಲಿ ಪ್ರಯಾಣಿಕರ ಸಂಖ್ಯೆಯ ಸಾಕಷ್ಟು ಕಡಿಮೆ ಇತ್ತು. ಕೇವಲ ಇಬ್ಬರು ಪ್ರಯಾಣಿಕರು ಮಾತ್ರ ಬಸ್ಸಿನಲ್ಲಿದ್ದರು. ಇಬ್ಬರೂ ಕೂಡಾ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಬಸ್ ಚಾಲಕ ಹಾಗೂ ನಿರ್ವಾಹಕ ಕೂಡಾ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತದಿಂದ ಬಸ್ಸಿನ ಗಾಜು ಪುಡಿಯಾಗಿದ್ದು, ಪ್ರಯಾಣಿಕರು ಬಸ್ಸಿನ ಮುಂಭಾಗದಿಂದ ಹೊರಬಂದಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪೊಳಲಿ : ಚಾಲಕನ ನಿಯಂತ್ರಣ ಮೀರಿ ಖಾಸಗಿ ಬಸ್ ಪಲ್ಟಿ, ಪ್ರಯಾಣಿಕರು ಪಾರು Rating: 5 Reviewed By: karavali Times
Scroll to Top