ಮಾರಿಪಳ್ಳ : ಅಂಬ್ಯುಲೆನ್ಸ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಆಸ್ಪತ್ರೆಗೆ - Karavali Times ಮಾರಿಪಳ್ಳ : ಅಂಬ್ಯುಲೆನ್ಸ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಆಸ್ಪತ್ರೆಗೆ - Karavali Times

728x90

3 June 2024

ಮಾರಿಪಳ್ಳ : ಅಂಬ್ಯುಲೆನ್ಸ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಆಸ್ಪತ್ರೆಗೆ

ಬಂಟ್ವಾಳ, ಜೂನ್ 03, 2024 (ಕರಾವಳಿ ಟೈಮ್ಸ್) : ಅಂಬ್ಯುಲೆನ್ಸ್ ವಾಹನ ಡಿಕ್ಕಿಯಾಗಿ ಸ್ಕೂಟರ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪುದು ಗ್ರಾಮದ ಮಾರಿಪಳ್ಳ ಜಂಕ್ಷನ್ನಿನಲ್ಲಿ ಭಾನುವಾರ ಮಧ್ಯಾಹ್ನ ವೇಳೆ ನಡೆದಿದೆ. 

ಗಾಯಾಳು ಸ್ಕೂಟರ್ ಸವಾರನನ್ನು ವಳಚ್ಚಿಲ್ ಪದವು ನಿವಾಸಿ ಬದ್ರುದ್ದೀನ್ ಎಂದು ಹೆಸರಿಸಲಾಗಿದೆ. ಇವರು ಹೆದ್ದಾರಿಯಲ್ಲಿ ಫರಂಗಿಪೇಟೆಗೆ ಕಡೆಯಿಂದ ಮಾರಿಪಳ್ಳ ಕಡೆಗೆ ಸ್ಕೂಟರಿನಲ್ಲಿ ಬರುತ್ತಿದ್ದ ವೇಳೆ ಮಾರಿಪಳ್ಳ ಜಂಕ್ಷನ್ನಿನಲ್ಲಿ ರಸ್ತೆ ಡಿವೈಡರ್ ಕ್ರಾಸ್ ಮಾಡುತ್ತಿದ್ದ ವೇಳೆ ಬಿ ಸಿ ರೋಡು ಕಡೆಯಿಂದ ಮಂಗಳೂರು ಕಡೆಗೆ ಕುಮಾರ ಬಸಪ್ಪ ಭಜಂತ್ರಿ ಎಂಬವರು ಚಲಾಯಿಸಿಕೊಂಡು ಬಂದ ಅಂಬ್ಯುಲೆನ್ಸ್ ವಾಹನ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. 

ಅಪಘಾತದದಿಂದ ಬದ್ರುದ್ದೀನ್ ಅವರು ಸ್ಕೂಟರ್ ಸಮೇತವಾಗಿ ರಸ್ತೆಗೆ ಬಿದ್ದು ಗಾಯಗೊಂಡಿದ್ದಾನೆ. ತಕ್ಷಣ ಅಂಬ್ಯುಲೆನ್ಸ್ ಚಾಲಕ ಕುಮಾರ ಬಸಪ್ಪ ಅವರು ತನ್ನ ಅಂಬ್ಯುಲೆನ್ಸ್ ವಾಹನದಲ್ಲಿ ಗಾಯಾಳು ಬದ್ರುದ್ದೀನ್ ನನ್ನು ಪಡೀಲ್ ಫಸ್ಟ್ ನ್ಯೂರೋ ಆಸ್ಪತ್ರೆಗೆ ಸಾಗಿಸಿದ್ದಾನೆ. ಈ ಬಗ್ಗೆ ಗಾಯಾಳು ಬದ್ರುದ್ದೀನ್ ಅವರ ಸಂಬಂಧಿ ಹಮೀದ್ ಎಂಬವರ ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಾರಿಪಳ್ಳ : ಅಂಬ್ಯುಲೆನ್ಸ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಆಸ್ಪತ್ರೆಗೆ Rating: 5 Reviewed By: karavali Times
Scroll to Top