ಬಂಟ್ವಾಳ, ಜೂನ್ 16, 2024 (ಕರಾವಳಿ ಟೈಮ್ಸ್) : ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವುಗೈದ ಘಟನೆ ಮಾಣಿ ಗ್ರಾಮದ ಮಾಣಿ ಪಲಿಕೆ ಎಂಬಲ್ಲಿ ಶನಿವಾರ ಮಧ್ಯಾಹ್ನ ವೇಳೆ ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ ಜಯರಾಜ್ (25) ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಶನಿವಾರ ಬೆಳಿಗ್ಗೆ ಜಯರಾಜ್ ಅವರ ಸಹೋದರ ಸುಜಯ್ ಅವರು ಮನೆಗೆ ಬೀಗ ಹಾಕಿ ತೆರಳಿದ್ದು, ಮಧ್ಯಾಹ್ನ ಜಯರಾಜ್ ಅವರು ಮನೆಗೆ ಬಂದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ.
ಮನೆಯ ಹಿಂಬಾಗಿಲು ಮುರಿದು ಒಳಪ್ರವೇಶೀಸಿದ ಕಳ್ಳರು ಮನೆಯೊಳಗಿದ್ದ ಗೋದ್ರೆಜ್ ಕಪಾಟಿನ ಲಾಕರ್ ಮುರಿದು ಅದರಲ್ಲಿದ್ದ ಜಯರಾಜ್ ಅವರ 78 ಸಾವಿರ ರೂಪಾಯಿ ಮೌಲ್ಯದ 12 ಗ್ರಾಂ ತೂಕದ ಚಿನ್ನದ ಚೈನ್ ಹಾಗೂ ಅವರ ತಾಯಿಯ 26 ಸಾವಿರ ರೂಪಾಯಿ ಮೌಲ್ಯದ 4 ಗ್ರಾಂ ತೂಕದ ಕಿವಿಯ ಆಭರಣ ಮತ್ತು 15 ಸಾವಿರ ರೂಪಾಯಿ ನಗದು ಹಣ, ಜಯರಾಜ್ ಅವರ ಪಾಸ್ ಪೋರ್ಟ್ ಕಳ್ಳತನಗೈದು ಪರಾರಿಯಾಗಿದ್ದಾರೆ.
ಈ ಬಗ್ಗೆ ಜಯರಾಜ್ ಅವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment