ಮಲಾಯಿಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿ ನವೀಕೃತ ಕಟ್ಟಡ ಉದ್ಘಾಟನೆ
ಬಂಟ್ವಾಳ, ಜೂನ್ 13, 2024 (ಕರಾವಳಿ ಟೈಮ್ಸ್) : ಹೃದಯ ಶುದ್ದಿಯಿಂದ ಕೈಗೊಂಡ ಸತ್ಕರ್ಮಗಳು ಮಾತ್ರ ಫಲಪ್ರದವಾಗಲಿದೆ. ಮಸೀದಿ ನಿರ್ಮಾಣದಂತಹ ಉತ್ತಮ ಕೆಲಸಗಳು ಕೂಡಾ ಇದೇ ಸಾಲಿನಲ್ಲಿ ಒಳಪಡುತ್ತದೆ ಎಂದು ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು.
ಸಜಿಪಮುನ್ನೂರು ಗ್ರಾಮದ ಮಲಾಯಿಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿಯ ನವೀಕೃತ ಕಟ್ಟಡವನ್ನು ಬುಧವಾರ ಸಂಜೆ ಉದ್ಘಾಟಿಸಿ, ದುವಾಶಿರ್ವಚನಗೈದ ಅವರು, ಮಸೀದಿಗಳು ದೈವಭಕ್ತಿಯ ಜೊತೆಗೆ ಸಾಮಾಜಿಕ ಸಾಮರಸ್ಯವನ್ನು ಕಲಿಸುವ ಕೇಂದ್ರಗಳಾಗಿದ್ದು, ಇದನ್ನು ಮೈಗೂಡಿಸಿಕೊಂಡಾಗ ಜೀವನ ಧನ್ಯವಾಗಲಿದೆ ಎಂದರು.
ಜನಿಸಿದ ಸರ್ವರೂ ಮರಣ ಹೊಂದಲಿಕ್ಕಿದೆ ಎಂಬ ಸತ್ಯವನ್ನು ಮನಗಂಡು ದೈವಭಕ್ತಿಯಿಂದ ಜೀವಿಸಿದಾಗ ಮಾನವೀಯ ಮೌಲ್ಯವನ್ನು ಅರ್ಥಮಾಡಿಕೊಳ್ಳುವ ಮನಸ್ಥಿತಿ ಉಂಟಾಗಲಿದೆ ಎಂದ ತಂಙಳ್ ಮಸೀದಿ ನಿರ್ಮಾಣ ಅಥವಾ ನವೀಕರಣ ಕಾರ್ಯಗಳು ಲೌಕಿಕ ಸ್ಪರ್ಧೆಯ ಉದ್ದೇಶ ಹೊಂದದೆ ದೈವಭಕ್ತಿಯ ಉತ್ಪಾದನೆ ಹಾಗೂ ಆರಾಧನೆಯ ಸದುದ್ದೇಶವನ್ನು ಹೊಂದಿರಬೇಕು. ಅಂತಹ ಉದ್ದೇಶದಿಂದ ನಿರ್ಮಿಸಿದ ಮಸೀದಿಗಳಿಂದ ಹೃದಯಶುದ್ದಿ ಇರುವ ವಿಶ್ವಾಸಿಗಳು ಬೆಳೆದುಬರಬೇಕು ಎಂದು ತಾಕೀತು ಮಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಜಾತ್ಯಾತೀತ, ಸಾಮರಸ್ಯದ ಭಾರತ ಕಟ್ಟುವಲ್ಲಿ ನಾಯಕನಾದವನು ವೇದಿಕೆಯಲ್ಲಿ ಮಾತಿನ ಮಂಟಪವನ್ನು ಕಟ್ಟುವ ಬದಲು ವೈಯುಕ್ತಿಕ ನಡವಳಿಕೆಯನ್ನು ಉತ್ತಮವಾದುದನ್ನು ಮೈಗೂಡಿಸಿಕೊಂಡಾಗ ಹೆಚ್ಚು ಅರ್ಥಪೂರ್ಣವಾಗುತ್ತದೆ. ಸಮಾಜದ ಎಲ್ಲ ವರ್ಗದ ಜನರ ಪ್ರೀತಿ ಗಳಿಸುವುದಕ್ಕಿಂತ ದೊಡ್ಡ ಸಂಪತ್ತು ಈ ಲೋಕದಲ್ಲಿ ಬೇರ ಯಾವುದೂ ಇಲ್ಲ. ಹಣಕೊಟ್ಟರೂ ಗಳಿಸಲಾದ ಸಂಪತ್ತು ಜನರ ಪ್ರೀತಿಯಾಗಿದ್ದು, ಅದನ್ನು ಗಳಿಸಿಕೊಳ್ಳುವುದು ದೇವರ ವಿಶೇಷ ಅನುಗ್ರಹವಾಗಿದೆ ಎಂದರು.
ಮಸೀದಿ ಅಧ್ಯಕ್ಷ ಯೂಸುಫ್ ಕರಂದಾಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಬ್ದುಲ್ ಖಾದರ್ ಅಲ್-ಖಾಸಿಮಿ ಬಂಬ್ರಾಣ, ಸಯ್ಯಿದ್ ಹುಸೈನ್ ಬಾ-ಅಲವಿ ತಂಙಳ್ ಕುಕ್ಕಾಜೆ, ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಪೂಜಾರಿ, ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ ಅಶ್ವನಿ ಕುಮಾರ್ ರೈ, ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಸಜಿಪಮುನ್ನೂರು ಗ್ರಾ ಪಂ ಮಾಜಿ ಅಧ್ಯಕ್ಷರುಗಳಾದ ದೇವಿಪ್ರಸಾದ್ ಪೂಂಜಾ, ಎಂ ಪರಮೇಶ್ವರ, ಪ್ರಮುಖರಾದ ಎಸ್ ಬಿ ದಾರಿಮಿ ಉಪ್ಪಿನಂಗಡಿ, ಕೆ ಆರ್ ಹುಸೈನ್ ದಾರಿಮಿ ರೆಂಜಲಾಡಿ, ಉಮರ್ ಶಾಫಿ ದಾರಿಮಿ ಮಲಾಯಿಬೆಟ್ಟು, ಅನೀಸ್ ಕೌಸರಿ, ಅಶ್ರಫ್ ಫೈಝಿ ಮಿತ್ತಬೈಲು, ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಖಾಸಿಂ ದಾರಿಮಿ ನಂದಾವರ, ಸಯ್ಯಿದ್ ಇಬ್ರಾಹಿಂ ಬಾಸಿತ್ ತಂಙಳ್ ಅಲ್-ಅನ್ಸಾರಿ ಕುಕ್ಕಾಜೆ, ಯಾಸರ್ ಅರಾಫತ್ ಕೌಸರಿ ಬೆಳ್ಳಾರೆ, ಅಶ್ಫಾಕ್ ಫೈಝಿ ನಂದಾವರ, ಸಲೀಂ ಅರ್ಶದಿ ಪಲ್ಲಮಜಲು, ರಿಯಾಝ್ ರಹ್ಮಾನಿ ಬೋಳಿಯಾರು, ಸಯ್ಯಿದ್ ಅಲಿ ಮನ್ನಾನಿ ಆಲಾಡಿ, ಹಾಫಿಳ್ ಅಬ್ದುಲ್ ಹಕೀಂ ಯಮಾನಿ ಮಿತ್ತಬೈಲು, ಇಸ್ಮಾಯಿಲ್ ಯಮಾನಿ, ರಶೀದ್ ಹನೀಫಿ, ಹಾಶಿಂ ಅರ್ಶದಿ ಮಿತ್ತಬೈಲು, ಇಬ್ರಾಹಿಂ ಝೈನಿ ಮಲಾಯಿಬೆಟ್ಟು, ಅಬೂಬಕ್ಕರ್ ಝುಹ್ರಿ ಮಲಾಯಿಬೆಟ್ಟು, ಮಜೀದ್ ಫೈಝಿ ನಂದಾವರ, ಧನಂಜಯ ಶೆಟ್ಟಿ ಪರಾರಿ, ಅಲ್ತಾಫ್ ಕುಳಾಯಿ, ಸಲೀಂ ಆಲಾಡಿ, ಮುಹಮ್ಮದ್ ಸಾಗರ್ ಬಿ ಸಿ ರೋಡು, ಅಬ್ದುಲ್ ರಹಿಮಾನ್ ಕೇಕುನಾರಬೆಟ್ಟು, ರಿಯಾಝ್ ತನ್ನಚ್ಚಿಲ್, ಅಬ್ದುಲ್ ಕರೀಂ ಟಿ ಎಂ, ಅಬೂಬಕ್ಕರ್ ಕಕ್ಕಿಂಜೆ, ಶರೀಫ್ ಮಲಾಯಿಬೆಟ್ಟು, ಬದ್ರುದ್ದೀನ್ ಮುನ್ನೂರು, ಇಕ್ಬಾಲ್ ಪಡ್ಪು, ಮಹಮ್ಮದ್ ಯಾನೆ ಚೆರಿಯಮೋನು, ಫಾರೂಕ್ ಮಲಾಯಿಬೆಟ್ಟು, ಶರೀಫ್ ಟಿ ಮಲಾಯಿಬೆಟ್ಟು, ಮುಸ್ತಫಾ ಮುನ್ನೂರು ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಮಸೀದಿ ಗೌರವಾಧ್ಯಕ್ಷ ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು, ಎಂಪಾಯರ್ ಪೆಟ್ರೋಕೆಮ್ ಪ್ರೈವೇಟ್ ಲಿಮಿಟೆಡ್ ಇದರ ಡೈರೆಕ್ಟರ್ ಅಬ್ದುಲ್ ಕರೀಂ ಬಾಳಿಕೆ, ಎಸ್ ಕೆ ಎಸ್ ಎಸ್ ಎಫ್ ಮಲಾಯಿಬೆಟ್ಟು ಅಧ್ಯಕ್ಷ ಇಬ್ರಾಹಿಂ ಮಲಾಯಿಬೆಟ್ಟು, ಮಸೀದಿ ಕಟ್ಟಡದ ಇಂಜಿನಿಯರ್ ಫೈರೋಝ್ ಕಲ್ಲಡ್ಕ, ಸೆಂಟ್ರಿಂಗ್ ಕಂಟ್ರಾಕ್ಟರ್ ರಿಯಾಝ್ ತನ್ನಚ್ಚಿಲ್ ಅವರನ್ನು ಮಸೀದಿ ಆಡಳಿತ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಯೂತ್ ಮೆನ್ಸ್ ಮುನ್ನೂರು, ಎಸ್ಕೆಎಸ್ಸೆಸ್ಸೆಫ್ ಮಲಾಯಿಬೆಟ್ಟು, ಯಂಗ್ ಫ್ರೆಂಡ್ಸ್ ತನ್ನಚ್ಚಿಲ್, ಶ್ರೀ ಶಾರದಾ ಫ್ರೆಂಡ್ಸ್ ಸರ್ಕಲ್ ವಿದ್ಯಾನಗರ-ಉದ್ದೊಟ್ಟು, ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡಗಳು ಕಾರ್ಯಕ್ರಮಕ್ಕೆ ಸಹಕರಿಸಿದರು. ಮಸೀದಿ ಅಧ್ಯಕ್ಷ ಯೂಸುಫ್ ಕರಂದಾಡಿ ಸ್ವಾಗತಿಸಿ, ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment