ಬಂಟ್ವಾಳ, ಜೂನ್ 01, 2024 (ಕರಾವಳಿ ಟೈಮ್ಸ್) : ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ ಕೆ ಕೆ ಮಂಜುನಾಥ್ ಕುಮಾರ್ ಹಾಗೂ ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರಿಗೆ ತಮ್ಮ ಅಮೂಲ್ಯವಾದ ಮತ ನೀಡಿ ಬಹುಮತದಿಂದ ಗೆಲ್ಲಿಸಬೇಕೆಂದು ಬಂಟ್ವಾಳ ತಾಲೂಕಿನ ಕಕ್ಯಪದವು, ವಾಮದಪದವು, ಸಿದ್ದಕಟ್ಟೆ, ರಾಯಿ, ಉಳಿ, ಮಣಿನಾಲ್ಕೂರು, ನಯನಾಡು, ಕರ್ಪೆ, ಅರಳ, ಲೋರೆಟ್ಟೊ, ಬುರೂಜ್ ಪದವಿಪೂರ್ವ ಕಾಲೇಜುಗಳಿಗೆ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದ ನಿಯೋಗ ಭೇಟಿ ನೀಡಿ ಮತ ಯಾಚನೆ ನಡೆಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಚುನಾವಣಾ ಉಸ್ತುವಾರಿಗಳಾದ ಕುಮಾರಿ ಅಪ್ಪಿ, ಶಶಿಕಲಾ ಪದ್ಮನಾಭ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ ಪದ್ಮಶೇಖರ್ ಜೈನ್, ಪ್ರಮುಖರಾದ ಜಗದೀಶ್ ಕೊಯಿಲ, ಅಶೋಕ್ ಸಿದ್ದಕಟ್ಟೆ, ನವೀನ್ ಶೆಟ್ಟಿ, ನೆಲ್ವಿ ಸ್ಟಾರ್, ಸುಧೀರ್ ಶೆಟ್ಟಿ, ರಮೇಶ್ ಮಾಸ್ಟರ್ ರಾಯಿ, ಜಯಕರ ಸಿದ್ದಕಟ್ಟೆ, ದಿನೇಶ್ ಸಿದ್ದಕಟ್ಟೆ, ಬಾಲಕೃಷ್ಣ ಅಂಚನ್ ಮೊದಲಾದವರು ಜೊತೆಗಿದ್ದರು.
0 comments:
Post a Comment