ಬಂಟ್ವಾಳ, ಜೂನ್ 25, 2024 (ಕರಾವಳಿ ಟೈಮ್ಸ್) : ಯಾವುದೇ ಕಲೆಯನ್ನು ಒಮ್ಮೆ ಪ್ರಯತ್ನ ಪಟ್ಟು ಅಭ್ಯಾಸ ಮಾಡಿದರೆ ಅದು ಮತ್ತೆ ಅವರನ್ನು ಬಿಟ್ಟು ಹೋಗುವುದಿಲ್ಲ ಎಂದು ನೃತ್ಯ ನಿರ್ದೇಶಕ ಮಹೇಶ್ ಕುಲಾಲ್ ಕಡೇಶಿವಾಲಯ ಹೇಳಿದರು.
ಬಿ ಸಿ ರೋಡಿನ ಪೆÇಸಳ್ಳಿ ಕುಲಾಲ ಭವನದಲ್ಲಿ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿರುವ ಕುಲಾಲ ಸೇವಾದಳದ ವತಿಯಿಂದ ನಡೆದ ಚೈತನ್ಯ 3.0ರ ಪುನರಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಳಪತಿ ಗಣೇಶ್ ಕುಲಾಲ್ ಬೆದ್ರಗುಡ್ಡೆ ಮಾತನಾಡಿ ಎಲ್ಲರ ಸಹಕಾರದಿಂದ ಚೈತನ್ಯ ನಿರಂತರ ಕಾರ್ಯಾಗಾರ ನಡೆಯುತ್ತಿದೆ. ಇನ್ನಷ್ಟು ಕುಲಾಲ ಬಾಂಧವರಿಗೆ ಇದರ ಪ್ರಯೋಜನ ಸಿಗುವಂತಾಗಲಿ ಎಂದು ಹಾರೈಸಿದರು.
ಮಾಜಿ ಕುಲಾಲ ಸೇವಾದಳದ ದಳಪತಿ ಸಂದೀಪ್ ಸಾಲ್ಯಾನ್ ಮಾತನಾಡಿ ಕುಲಾಲ ಸಮಾಜ ಬಾಂಧವರಿಗೆ ನಾಯಕರಾಗಲು ಕುಲಾಲ ಸೇವಾದಳದಲ್ಲಿ ಉತ್ತಮ ಅವಕಾಶ ಇದೆ. ಅಷ್ಟೇ ಅಲ್ಲದೇ ಕಳೆದ ಎರಡು ವರ್ಷದಿಂದ ಕುಲಾಲ ಬಾಂಧವರಿಗೆ ನಡೆಯುತ್ತಿರುವ ಉಚಿತ ನಿರಂತರ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂದಿದ್ದು ಮುಂದೆಯೂ ಒಳ್ಳೆಯ ತರಬೇತಿ ನಿರಂತರವಾಗಿ ನೀಡುವಂತಾಗಲಿ ಎಂದರು.
ಪ್ರೇಮನಾಥ ಕುಲಾಲ್ ನೇರಂಬೋಳು ಅವರು ಕೊಳಲು ನುಡಿಸುವ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಕುಲಾಲ ಸಮಾಜದ ಹಿರಿಯರಾದ ಜಯ ಭಂಡಾರಿಬೆಟ್ಟು, ನ್ಯಾಯವಾದಿ ಯಶೋಧ ಎಸ್ ಭಾಗವಹಿಸಿದ್ದರು. ಸೇವಾದಳದ ಸದಸ್ಯರುಗಳಾದ ತಾರನಾಥ ಮೊಡಂಕಾಪು, ದೇವದಾಸ ಅಗ್ರಬೈಲು, ಜಯಂತ ಅಗ್ರಬೈಲು, ಜಯಾನಂದ ಸಜಿಪ, ರಾಘವೇಂದ್ರ ಕಾಮಾಜೆ, ಯಾದವ ಅಗ್ರಬೈಲು, ರಾಜೇಶ್ ಭಂಡಾರಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಚಂದ್ರಶೇಖರ ದೈಪಲ ಸ್ವಾಗತಿಸಿ, ಕೃತಿಕ್ ಕುಮಾರ್ ವೈ ಎಸ್ ವಂದಿಸಿದರು. ಕು ಮಿಥ್ವಿ, ಕು ಧನ್ಯಾ, ಕು ವೈಷ್ಣವಿ, ಕು ಶ್ರಾವಣಿ, ಮಾ ನಮನ್ ಕುಲಾಲ್, ಮಾ ಗಗನ್ ಜೆ ಸಿ, ಕು ಹರ್ಷಿತಾ ಜೆ ಪ್ರಾರ್ಥಿಸಿದರು.
0 comments:
Post a Comment