ಕೊಕ್ಕಪುಣಿ : ಮನೆಗೆ ನುಗ್ಗಿ ನಗದು ಹಾಗೂ ಫರ್ ಫ್ಯೂಮ್ ಬಾಟಲ್ ಕಳ್ಳತನ - Karavali Times ಕೊಕ್ಕಪುಣಿ : ಮನೆಗೆ ನುಗ್ಗಿ ನಗದು ಹಾಗೂ ಫರ್ ಫ್ಯೂಮ್ ಬಾಟಲ್ ಕಳ್ಳತನ - Karavali Times

728x90

16 June 2024

ಕೊಕ್ಕಪುಣಿ : ಮನೆಗೆ ನುಗ್ಗಿ ನಗದು ಹಾಗೂ ಫರ್ ಫ್ಯೂಮ್ ಬಾಟಲ್ ಕಳ್ಳತನ

ಬಂಟ್ವಾಳ, ಜೂನ್ 17, 2024 (ಕರಾವಳಿ ಟೈಮ್ಸ್) : ಮನೆ ಮಂದಿ ಮಲಗಿದ್ದ ವೇಳೆ ಒಳಗೆ ನುಗ್ಗಿ ನಗದು ಹಣ ಹಾಗೂ ಫರ್ ಫ್ಯೂಮ್ ಬಾಟಲಿ ಕಳವುಗೈದ ಘಟನೆ ಬೋಳಂತೂರು ಗ್ರಾಮದ ಕೊಕ್ಕಪುಣಿ ಎಂಬಲ್ಲಿ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. 

ಇಲ್ಲಿನ ನಿವಾಸಿ ನಸೀಮಾ (42) ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಇವರು ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಈ ಕಳವು ಕೃತ್ಯ ನಡೆದಿದ್ದು, ಬೆಳಿಗ್ಗೆ ಕೃತ್ಯ ಬೆಳಕಿಗೆ ಬಂದಿದೆ. ಎದುರು ಬಾಗಿಲಿನ ಬೀಗ ಮುರಿದು ಮನೆಯೊಳಗೆ ಪ್ರವೇಶಿಸಿದ ಕಳ್ಳರು ಮನೆಯೊಳಗಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಪಾಟಿನಲ್ಲಿದ್ದ 1 ಸಾವಿರ ರೂಪಾಯಿ ನಗದು ಹಾಗೂ ಕೆಲವು ಫರ್ ಫ್ಯೂಮ್ ಬಾಟಲಿಗಳನ್ನು ಕದ್ದೊಯ್ದಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಕೊಕ್ಕಪುಣಿ : ಮನೆಗೆ ನುಗ್ಗಿ ನಗದು ಹಾಗೂ ಫರ್ ಫ್ಯೂಮ್ ಬಾಟಲ್ ಕಳ್ಳತನ Rating: 5 Reviewed By: karavali Times
Scroll to Top