ಬಂಟ್ವಾಳ, ಜೂನ್ 20, 2024 (ಕರಾವಳಿ ಟೈಮ್ಸ್) : ನೆರೆಮನೆ ನಿವಾಸಿಗಳ ಗಲಾಟೆ ಬಿಡಿಸಲು ಹೋದ ವ್ಯಕ್ತಿಗೆ ಜಾತಿ ನಿಂದನೆಗೈದು ಹಲ್ಲೆ ನಡೆಸಿದ ಘಟನೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಉಳಿ ಗ್ರಾಮದ ಕಕ್ಕೆಪದವು ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.
ಗಾಯಗೊಂಡ ವ್ಯಕ್ತಿಯನ್ನು ಇಲ್ಲಿನ ನಿವಾಸಿ ಪವನ್ (25) ಎಂದು ಹೆಸರಿಸಲಾಗಿದೆ. ಆರೋಪಿಗಳನ್ನು ದೀಪಕ್, ಅವರ ತಂದೆ ಚಂದ್ರಶೇಖರ್ ಹಾಗೂ ಇನ್ನೊಬ್ಬ ಎಂದು ಗುರುತಿಸಲಾಗಿದೆ.
ಪವನ್ ಬುಧವಾರ ರಾತ್ರಿ ಮನೆಯಲ್ಲಿದ್ದ ವೇಳೆ ಮನೆ ಸಮೀಪ ವಾಸವಿರುವ ಚಂದ್ರಶೇಖರ ಅವರ ಪತ್ನಿ ಸೇಸಮ್ಮ ಹಾಗೂ ಅವರ ಮಗ ದೀಪಕ್ ಅವರು, ನೆರೆಮನೆಯ ಸೌಮ್ಯ ಎಂಬವರೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡುತ್ತಿದ್ದು, ಗಲಾಟೆ ಶಬ್ದ ಕೇಳಿ ಪವನ್ ಅವರು ಸೌಮ್ಯ ಅವರ ಮನೆ ಸಮೀಪ ಹೋಗಿರುತ್ತಾರೆ. ಆಗ ಆರೋಪಿ ದೀಪಕ್ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಏಕಾಏಕಿ ಆತನ ಕೈಯಲ್ಲಿದ್ದ ಕೋಲಿನಿಂದ ಪವನ್ ಮುಖಕ್ಕೆ ಹೊಡೆದು ಗಾಯಗೊಳಿಸಿರುತ್ತಾನೆ. ಈ ಸಂದರ್ಭ ಪವನ್ ಬೊಬ್ಬೆ ಹೊಡೆದಾಗ, ಆರೋಪಿ ದೀಪPಕನ ತಂದೆ ಚಂದ್ರಶೇಖರ ಹಾಗೂ ಅವರ ಮನೆಗೆ ಬಂದಿದ್ದ ನೆಂಟರೊಬ್ಬರು ಅಲ್ಲಿಗೆ ಬಂದು ಹಲ್ಲೆ ನಡೆಸಿ ಗಾಯಗೊಳಿಸಿರುತ್ತಾರೆ. ನಂತರ ಆರೋಪಿಗಳೆಲ್ಲರೂ ಪವನ್ ಅವರನ್ನುದ್ದೇಶಿಸಿ, ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿರುತ್ತಾರೆ ಎಂದು ದೂರಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 51/2024 ಕಲಂ 3(1)(ಆರ್)(ಎಸ್, 3(2)(ವಿಎ) ಎಸ್ ಸಿ/ಎಸ್ ಟಿ ಅಮೆಂಡ್ ಮೆಂಟ್ ಆಕ್ಟ್ 2015 ಹಾಗೂ ಕಲಂ 323, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment