ಕೆಮ್ಮಾನ್ ಪಳಿಕೆ ನಿವಾಸಿ ರಫೀಕ್ ಹೃದಯ ಸಂಬಂಧಿ ಅನಾರೋಗ್ಯದಿಂದ ನಿಧನ - Karavali Times ಕೆಮ್ಮಾನ್ ಪಳಿಕೆ ನಿವಾಸಿ ರಫೀಕ್ ಹೃದಯ ಸಂಬಂಧಿ ಅನಾರೋಗ್ಯದಿಂದ ನಿಧನ - Karavali Times

728x90

21 June 2024

ಕೆಮ್ಮಾನ್ ಪಳಿಕೆ ನಿವಾಸಿ ರಫೀಕ್ ಹೃದಯ ಸಂಬಂಧಿ ಅನಾರೋಗ್ಯದಿಂದ ನಿಧನ

ಬಂಟ್ವಾಳ, ಜೂನ್ 22, 2024 (ಕರಾವಳಿ ಟೈಮ್ಸ್) : ಕಡೇಶ್ವಾಲ್ಯ ಗ್ರಾಮದ ಕೆಮ್ಮಾನ್ ಪಳಿಕೆ ನಿವಾಸಿ ಮುಹಮ್ಮದ್ ರಫೀಕ್ (55) ಅವರು ಹೃದಯ ಸಂಬಂಧಿ ಅನಾರೋಗ್ಯದಿಂದ ಶನಿವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 

ಮಂಗಳವಾರ ಹೃದಯ ಸಂಬಂಧಿ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಬಿ ಸಿ ರೋಡು ಕೇಂದ್ರೀಕರಿಸಿಕೊಂಡು ಡಾಕ್ಯುಮೆಂಟ್ ಕೆಲಸ ನಿರ್ವಹಿಸುತ್ತಿದ್ದ ಮೃತರು ತಾಯಿ, ಪತ್ನಿ, ಐವರು ಗಂಡು ಮಕ್ಕಳ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ನಚ್ಚಬೆಟ್ಟು ಜುಮಾ ಮಸೀದಿಯಲ್ಲಿ ಶನಿವಾರ ಅಪರಾಹ್ನದ ಬಳಿಕ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.   

  • Blogger Comments
  • Facebook Comments

0 comments:

Post a Comment

Item Reviewed: ಕೆಮ್ಮಾನ್ ಪಳಿಕೆ ನಿವಾಸಿ ರಫೀಕ್ ಹೃದಯ ಸಂಬಂಧಿ ಅನಾರೋಗ್ಯದಿಂದ ನಿಧನ Rating: 5 Reviewed By: karavali Times
Scroll to Top