ಬಂಟ್ವಾಳ, ಜೂನ್ 28, 2024 (ಕರಾವಳಿ ಟೈಮ್ಸ್) : ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಬಂಟ್ವಾಳ ತಾಲೂಕಿನ ವಿವಿಧ ಮಳೆ ಹಾನಿ ಸಂಭಾವ್ಯ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಾಣೆಮಂಗಳೂರು ಗೂಡಿನಬಳಿ ನೇತ್ರಾವತಿ ಕಿನಾರೆ, ಗುಡ್ಡ ಕುಸಿತ ಪ್ರದೇಶ, ಪಾಣೆಮಂಗಳೂರು ಶ್ರೀ ಕಲ್ಲುರ್ಟಿ ಗುಡಿಯ ಬಳಿಯ ಪುರಸಭೆಯ ಟ್ಯಾಂಕ್ ಅಪಾಯಕಾರಿಯಾಗಿರುವ ಪ್ರದೇಶವನ್ನು ವೀಕ್ಷಿಸಿ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ಸಂದರ್ಭ ಮಾತನಾಡಿದ ಡೀಸಿ ಅವರು, ಮಳೆ ಮುನ್ನೆಚ್ಚರಿಕೆಯ ಕುರಿತು ಈಗಾಗಲೇ ಟಾಸ್ಕ್ ಪೆÇೀರ್ಸ್ ಸಕ್ರೀಯಗೊಳಿಸಲಾಗಿದ್ದು, ಪ್ರಾಕೃತಿಕ ವಿಕೋಪ ಪ್ರದೇಶ, ಪ್ರವಾಹ ಬಾಧಿತ ಪ್ರದೇಶಗಳನ್ನು ವೀಕ್ಷಣೆ ನಡೆಸಿ ಸ್ಥಳೀಯ ಅಧಿಕಾರಿಗಳು ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಬಂಟ್ವಾಳದಲ್ಲಿಯೂ ಹಲವು ಪ್ರದೇಶ ವೀಕ್ಷಿಸಿದ್ದು, ಗೂಡಿನಬಳಿಯಲ್ಲಿ ಗುಡ್ಡ ಕುಸಿತಕ್ಕೆ ನಿರ್ಮಾಣಗೊಂಡಿರುವ ತಡೆಗೋಡೆ ವೀಕ್ಷಿಸಿ ಹೆಚ್ಚುವರಿ ತಡೆಗೋಡೆಯ ಜತೆಗೆ ನೀರಿನ ಹರಿವಿಗೆ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ. ಪಾಣೆಮಂಗಳೂರಿನಲ್ಲಿ ಖಾಸಗಿ ಜಾಗದವರು ಗುಡ್ಡ ಅಗೆತದಿಂದ ಪುರಸಭೆಯ ನೀರಿನ ಟ್ಯಾಂಕ್ ಅಪಾಯದಲ್ಲಿದ್ದು, ಮುಂದೆ ಮತ್ತೆ ಗುಡ್ಡ ಅಗೆಯದಂತೆ ಕಾನೂನು ಪ್ರಕಾರ ತಡೆಯಾಜ್ಞೆ ತರುವಂತೆ ಪುರಸಭಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಇದೇ ವೇಳೆ ಪೆರ್ನೆ ಗ್ರಾಮದ ದೋರ್ಮೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ನೀರು ಹರಿದು ಹೋಗಲು ಸಮಸ್ಯೆಯಾಗಿ ಕೃಷಿ ಭೂಮಿಗೆ ಹಾನಿಯಾದ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿದರು.
ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಡಾ ಸಂತೋಷ್ ಕುಮಾರ್, ಪೆÇ್ರಬೆಷನರಿ ಐಎಎಸ್ ಅಧಿಕಾರಿ ಶುಶಾಂತ್, ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ ಪಿ ಜೆ, ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಆರೋಗ್ಯ ನಿರೀಕ್ಷಕ ರತ್ನಪ್ರಸಾದ್, ಇಂಜಿನಿಯರ್ ಡೊಮೆನಿಕ್ ಡಿ’ಮೆಲ್ಲೋ, ಸಂಘಟಕಿ ಉಮಾವತಿ, ಕಂದಾಯ ನಿರೀಕ್ಷಕರಾದ ಜನಾರ್ದನ ಜೆ, ವಿಜಯ್ ಆರ್ ಮೊದಲಾದವರು ಜೊತೆಗಿದ್ದರು.
0 comments:
Post a Comment