ಕೇಪು : ಹಳೆ ದ್ವೇಷದಿಂದ ವ್ಯಕ್ತಿಗೆ ಕೋಳಿ ಬಾಳ್ ನಿಂದ ಇರಿದ ಸಂಬಂಧಿಕ - Karavali Times ಕೇಪು : ಹಳೆ ದ್ವೇಷದಿಂದ ವ್ಯಕ್ತಿಗೆ ಕೋಳಿ ಬಾಳ್ ನಿಂದ ಇರಿದ ಸಂಬಂಧಿಕ - Karavali Times

728x90

4 June 2024

ಕೇಪು : ಹಳೆ ದ್ವೇಷದಿಂದ ವ್ಯಕ್ತಿಗೆ ಕೋಳಿ ಬಾಳ್ ನಿಂದ ಇರಿದ ಸಂಬಂಧಿಕ

ಬಂಟ್ವಾಳ, ಜೂನ್ 04, 2024 (ಕರಾವಳಿ ಟೈಮ್ಸ್) : ಹಳೆ ದ್ವೇಷದಿಂದ ವ್ಯಕ್ತಿಯೋರ್ವರಿಗೆ ಸಂಬಂಧಿಕನೇ ಕೋಳಿ ಬಾಳ್ ನಿಂದ ಇರಿದು ಹಲ್ಲೆ ನಡೆಸಿದ ಘಟನೆ ಕೇಪು ಗ್ರಾಮದ ಬಡೆಕೋಡಿ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ. 

ಇರಿತದಿಂದ ಗಾಯಗೊಂಡು ವ್ಯಕ್ತಿಯನ್ನು ಇಲ್ಲಿನ ನಿವಾಸಿ ಕೆ ಗಣೇಶ (35) ಎಂದು ಹೆಸರಿಸಲಾಗಿದ್ದು, ಆರೋಪಿಯನ್ನು ಅವರ ಚಿಕ್ಕಪ್ಪನ ಮಗ ಚಂದ್ರ ಅಲಿಯಾಸ್ ಚಂದ್ರಹಾಸ ಎಂದು ಗುರುತಿಸಲಾಗಿದೆ. 

ಗಣೇಶ ಅವರು ಸೋಮವಾರ ರಾತ್ರಿ ಮನೆಯ ಬಳಿ ಇದ್ದಾಗ ಚಿಕ್ಕಪ್ಪನ ಮಗ ಚಂದ್ರ @ ಚಂದ್ರಹಾಸನು ಯಾವುದೋ ಹಳೆಯ ದ್ವೇಷದಿಂದ ಅವಾಚ್ಯ ಶಬ್ದಗಳಿಂದ ಬೈದು, ಕೊಲ್ಲುವ ಉದ್ದೇಶದಿಂದ ಕೋಳಿ ಬಾಳ್ ನಿಂದ  ಹಲ್ಲೆ ನಡೆಸಿರುತ್ತಾನೆ. ಈ ವೇಳೆ ಗಣೇಶ ಅವರ ಪತ್ನಿ ಹಾಗೂ ತಾಯಿ ಬರುವುದನ್ನು ಕಂಡ ಆರೋಪಿ ಜೀವ ಬೆದರಿಕೆ ಒಡ್ಡಿ ಪರಾರಿಯಾಗಿರುತ್ತಾನೆ. ಹಲ್ಲೆಯಿಂದ ಗಾಯಗೊಂಡ ಗಣೇಶ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 98/2024 ಕಲಂ 504, 324, 341, 307, 506 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕೇಪು : ಹಳೆ ದ್ವೇಷದಿಂದ ವ್ಯಕ್ತಿಗೆ ಕೋಳಿ ಬಾಳ್ ನಿಂದ ಇರಿದ ಸಂಬಂಧಿಕ Rating: 5 Reviewed By: karavali Times
Scroll to Top