ಬಂಟ್ವಾಳ, ಜೂನ್ 03, 2024 (ಕರಾವಳಿ ಟೈಮ್ಸ್) : ಅಕ್ರಮ ಜಾನುವಾರು ಸಾಗಾಟ ಹಾಗೂ ಮಾಂಸ ಮಾಡುತ್ತಿದ್ದ ಜಾಗಕ್ಕೆ ದಾಳಿ ನಡೆಸಿದ ಪೂಂಜಾಲಕಟ್ಟೆ ಠಾಣಾ ಪೊಲೀಸರು ಜಾನುವಾರುಗಳು, ಮಾಂಸ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಂಡ ಘಟನೆ ಜೂನ್ 1 ರಂದು ಪುತ್ತಿಲ ಗ್ರಾಮದ ಪಲ್ಕೆ ಎಂಬಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಅಶ್ರಪ್ ಎಂಬಾತನು ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಹಾಗೂ ಕರಾಯ ಸಿರಾಜ್ ಎಂಬಾತನು ಅಕ್ರಮವಾಗಿ ಜಾನುವಾರನ್ನು ಕಡಿದು ಮಾಂಸ ಮಾಡುತ್ತಿರುವ ಬಗ್ಗೆ, ದೊರೆತ ಖಚಿತ ಮಾಹಿತಿಯಂತೆ ಪೂಂಜಾಲಕಟ್ಟೆ ಪೆÇಲೀಸ್ ಠಾಣಾ ಪಿಎಸ್ಸೈ ಉದಯರವಿ ವೈ ಎಂ ಅವರ ನೇತೃತ್ವದ ಪೊಲೀಸರು ಆರೋಪಿ ಅಶ್ರಫ್ ಎಂಬಾತನ ಮನೆಯ ಬಳಿ ತೆರಳಿದಾಗ ವಾಹನದಿಂದ ಜಾನುವಾರುಗಳನ್ನು ಇಳಿಸುತ್ತಿದ್ದ ಆರೋಪಿ ಅಲ್ಲಿಂದ ಓಡಿ ತಪ್ಪಿಸಿಕೊಂಡಿರುತ್ತಾನೆ. ಸ್ಥಳದಲ್ಲಿದ್ದ ಎರಡು ಜಾನುವಾರುಗಳನ್ನು ಹಾಗೂ ಸಾಗಾಟ ಮಾಡಲು ಉಪಯೋಗಿಸಿದ ವಾಹವನ್ನು ಮತ್ತು ವಾಹನದಲ್ಲಿದ್ದ ಮೊಬೈಲ್ ಫೋನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಳಿಕ ಇಲ್ಲಿಗೆ ಸಮೀಪದಲ್ಲೇ ಅಕ್ರಮವಾಗಿ ಜಾನುವಾರನ್ನು ಕಡಿದು ಮಾಂಸ ಮಾಡುತ್ತಿದ್ದ ಸಿರಾಜ್ ಎಂಬಾತನ ಮನೆಯ ಬಳಿ ತೆರಳಿದಾಗ ಸ್ಥಳದಲ್ಲಿದ್ದ ಕರಾಯದ ಸಿರಾಜ್ ಹಾಗೂ ಇನ್ನೊಬ್ಬ ಆರೋಪಿ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ. ಆತನ ಮನೆಯ ಹಿಂಭಾಗದ ಶೆಡ್ಡಿನಲ್ಲಿ ಜಾನುವಾರಿನ ಮಾಂಸ ಹಾಗೂ ಮಾಂಸ ಮಾಡಲು ಉಪಯೋಗಿಸಿ ಕತ್ತಿ ಹಾಗೂ ಇತರೆ ಸೊತ್ತುಗಳು ಪತ್ತೆಯಾಗಿರುತ್ತದೆ. ಸದ್ರಿ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿತರಾದ ಅಶ್ರಫ್ ಪಲ್ಕೆ ಹಾಗೂ ಸಿರಾಜ್ ಕರಾಯ ಹಾಗೂ ಇತರರ ವಿರುದ್ಧ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
0 comments:
Post a Comment