ಬಂಟ್ವಾಳ, ಜೂನ್ 18, 2024 (ಕರಾವಳಿ ಟೈಮ್ಸ್) : ಡಿಸ್ಕೌಂಟ್ ಬೆಲೆಗೆ ಶೇರು ಮಾರಾಟ ಮಾಡುವುದಾಗಿ ನಂಬಿಸಿ ವ್ಯಕ್ತಿಯೋರ್ವರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2024ರ ಮಾರ್ಚ್ ತಿಂಗಳ 23 ರಂದು ತನ್ನ ವಾಟ್ಸ್‍ಅಪ್ ಖಾತೆಗೆ ಅಲಿಸ್-ಎಲ್ ಆರ್ ಸಿ ಎಂಬ ವಾಟ್ಸ್‍ಅಪ್ ಗ್ರೂಪ್ ಲಿಂಕ್ ಬಂದಿದ್ದು, ಆ ಗೂಪಿಗೆ ಸೇರ್ಪಡೆಗೊಂಡ ಬಳಿಕ, ಷೇರು ಮಾರುಕಟ್ಟೆಯಲ್ಲಿ ಡಿಸ್ಕೌಂಟ್ ಬೆಲೆಗೆ ಷೇರುಗಳನ್ನು ಮಾರಾಟ ಮಾಡುವುದಾಗಿ ಪದೇ ಪದೇ ಮೆಸೆಜ್ ಬರುತ್ತಿದ್ದು, ಇದನ್ನು ನಂಬಿದ ವ್ಯಕ್ತಿ ಕಂಪೆನಿಯ ಖಾತೆಯಲ್ಲಿ ಹೂಡಿಕೆ ಮಾಡುವ ಸಲುವಾಗಿ ತನ್ನ ಬ್ಯಾಂಕ್ ಖಾತೆಗಳಿಂದ ಆರೋಪಿಗಳು ನೀಡಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 17.57 ಲಕ್ಷ ರೂಪಾಯಿ ಹಣವನ್ನು ಹೂಡಿಕೆ ಮಾಡಿರುತ್ತಾರೆ.
ಬಳಿಕ ಆರೋಪಿಗಳು ಇನ್ನೂ ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದು, ದೂರುದಾರರು ತಾನು ಜಮಾ ಮಾಡಿದ ಹಣ ತನ್ನ ಖಾತೆಗೆ ಮರು ಜಮಾ ಆಗದೆ ಇರುವುದರಿಂದ ತಾನು ಆರ್ಥಿಕ ವಂಚನೆಗೊಳಗಾದ ಬಗ್ಗೆ ತಿಳಿದ ಬಳಿಕ ಪೂಂಜಾಲಕಟ್ಟೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಂಚಕರ ಜಾಡು ಬೇಧಿಸಲು ತನಿಖೆ ಕೈಗೊಂಡಿದ್ದಾರೆ.
0 comments:
Post a Comment